irritate ಇರಿಟೇಟ್‍
ಸಕರ್ಮಕ ಕ್ರಿಯಾಪದ
  1. ಸಿಟ್ಟಿಗೆಬ್ಬಿಸು; ರೇಗಿಸು.
  2. ಪೀಡಿಸು; ಕಿರುಕುಳವುಂಟುಮಾಡು; ಉಪದ್ರವಮಾಡು; ಕಿರಿಕಿರಿ ಉಂಟುಮಾಡು.
  3. (ಶರೀರ ವಿಜ್ಞಾನ, ರೋಗಶಾಸ್ತ್ರ) (ದೇಹಾಂಗ ಮೊದಲಾದವುಗಳ ವಿಷಯದಲ್ಲಿ) ಕೆರಳಿಸು; ಉದ್ರೇಕಿಸು; ವೇದನೆಯುಂಟುಮಾಡು.
  4. (ಜೀವವಿಜ್ಞಾನ) (ದೇಹಾಂಗ ಮೊದಲಾದವನ್ನು) ಉತ್ತೇಜಿಸು; ಪ್ರಚೋದಿಸು; ಭೌತ ಪ್ರಚೋದನೆಯಿಂದ ಸಕ್ರಿಯಗೊಳಿಸು.