See also 2irregular
1irregular ಇರೆಗ್ಯುಲರ್‍
ಗುಣವಾಚಕ
  1. ಕ್ರಮವಲ್ಲದ; ಅಕ್ರಮವಾದ; ನೀತಿಗೆ ಯಾ ನಿಯಮಕ್ಕೆ ವಿರುದ್ಧವಾದ: irregular conduct ಅಕ್ರಮ ನಡವಳಿಕೆ. irregular documents ನಿಯಮವಿರುದ್ಧವಾದ ಕಾಗದ ಪತ್ರಗಳು.
  2. ಅತಿರೇಕದ; ವೈಪರೀತ್ಯದ.
  3. ಅಸಹಜ; ಅಸ್ವಾಭಾವಿಕ.
  4. ಅಸಮಪ್ರಮಾಣದ; ಯಥಾ ಪ್ರಮಾಣವಲ್ಲದ; ಒಂದೇ ಸಮವಲ್ಲದ; ಅಸಮರೂಪದ.
  5. (ಮೇಲ್ಮೈ ವಿಷಯದಲ್ಲಿ) ತಗ್ಗುತಿಟ್ಟಿನ; ಅಸಮಮಟ್ಟದ; ಏರುಪೇರಿನ; ನುಣುಪಿಲ್ಲದ; ತರಕಲಾದ; ಕೋಚುಕೋಚಾದ; ಸೊಟ್ಟನೆಯ: a rough irregular terrain ಒರಟಾದ ತಗ್ಗುತಿಟ್ಟಿನ ಪ್ರದೇಶ. a long irregular coastline ಉದ್ದನಾದ, ಕೋಚುಕೋಚಿನ ಕರಾವಳಿ. irregular teeth ಸೊಟ್ಟನಾದ ಹಲ್ಲುಗಳು.
  6. ಅಡ್ಡಾದಿಡ್ಡಿ; ಅವ್ಯವಸ್ಥಿತ; ಕ್ರಮರಹಿತ.
  7. ಶಿಸ್ತಿಲ್ಲದ; ಸ್ವೈರ; ಸ್ವಚ್ಛಂದ; ಕ್ರಮವಾದ ಜೀವನವನ್ನು ನಡೆಸದ: a wild irregular man in his youth ತನ್ನ ಯೌವನದಲ್ಲಿ ಒರಟನೂ ಸ್ವೈರನೂ ಆಗಿದ್ದವನು.
  8. (ಕಾಲಾವಧಿ, ಕ್ರಮ, ಮೊದಲಾದವುಗಳಲ್ಲಿ) ಅಸಮವಾದ; ನಿಯಮರಹಿತ; ಅನಿಯತ: irregular payments ಅನಿಯತ ಹಣಸಂದಾಯ.
  9. (ವ್ಯಾಕರಣ) ( ಕ್ರಿಯಾಪದ, ನಾಮವಾಚಕ, ಮೊದಲಾದವುಗಳ ವಿಷಯದಲ್ಲಿ) ರೂಢಿಯಾದ ವಿಭಕ್ತಿ ಮೊದಲಾದ ಪ್ರತ್ಯಯಗಳು ಹತ್ತದ: sell, cast, feed, ಇತ್ಯಾದಿ.
  10. (ಸೈನಿಕರ ವಿಷಯದಲ್ಲಿ) ಅನಿಯತ; ಕ್ರಮಬದ್ಧ ಉದ್ಯೋಗದಲ್ಲಿಲ್ಲದ.
  11. (ಹೂವಿನ ವಿಷಯದಲ್ಲಿ) ವಿಷಮ; ಅಸಮ ದಳಗಳು ಮೊದಲಾದವು ಇರುವ.
See also 1irregular
2irregular ಇರೆಗ್ಯುಲರ್‍
ನಾಮವಾಚಕ
  1. (ಬಹುವಚನದಲ್ಲಿ) ಅನಿಯತ ಸೈನಿಕರು; ಕ್ರಮವಾಗಿ ಸೈನ್ಯಕ್ಕೆ ಸೇರಿರದ ಸೈನಿಕರು.
  2. (ದೋಷವುಳ್ಳ ಯಾ ಒಂದು ಗೊತ್ತಾದ ಕ್ರಮಕ್ಕೆ ಹೊಂದಿಕೊಳ್ಳದ ಯಾ ಎರಡನೆಯ ದರ್ಜೆಯ ಯಾವುದೇ) ಕಳಪೆ ವಸ್ತು.