irredeemable ಇರಿಡೀಮಬ್‍ಲ್‍
ಗುಣವಾಚಕ
  1. (ಸರ್ಕಾರ ಮಾಡಬೇಕಾದ ವಾರ್ಷಿಕ ಸಂದಾಯದ ವಿಷಯದಲ್ಲಿ) ಅನಿವಾರಣೀಯ; ಅಪರಿಹರಣೀಯ; ಬಿಡಿಸಿಕೊಳ್ಳಲಾಗದ; ಠೇವಣಿ ವಾಪಸ್ಸು ಕೊಟ್ಟು ಬಿಡುಗಡೆ ಹೊಂದಲಾಗದ.
  2. (ಕರೆನ್ಸಿ ಹಣವನ್ನು ಚಲಾವಣೆಗೆ ಕೊಟ್ಟು ಸರ್ಕಾರವು ಕಾಗದದ ಹಣಕ್ಕೆ) ನಾಣ್ಯ ಕೊಡಲು ಬದ್ಧವಲ್ಲದ; ನಾಣ್ಯಕ್ಕೆ ಬದಲಾಯಿಸಲಾಗದ.
  3. ಅವಿಮೋಚನೀಯ; ಅನುದ್ಧಾರ್ಯ; ಉದ್ಧಾರ ಮಾಡಲಾಗದ; ಒಳ್ಳೆಯ ಮಾರ್ಗಕ್ಕೆ ತರಲಾಗದ: an irredeemable sinner ಉದ್ಧಾರ ಮಾಡಲಾಗದ ಪಾಪಿ.
  4. ನಿರಾಶೆಯ; ಹತಾಶ; ಆಶಾರಹಿತ: irredeemable gloom ನಿರಾಶಾದಾಯಕ ಮಬ್ಬು.
  5. ಅಪರಿಹಾರ್ಯವಾದ; ಅನಿವಾರಣೀಯವಾದ.