irradiate ಇರೇಡಿಏಟ್‍
ಸಕರ್ಮಕ ಕ್ರಿಯಾಪದ
  1. (ಒಂದು ವಸ್ತು ಮೊದಲಾದವುಗಳ ಮೇಲೆ) ಹೊಳೆ; ಬೆಳಗು.
  2. (ರೂಪಕವಾಗಿ) (ಒಂದು ವಿಷಯದ ಮೇಲೆ) ಬೆಳಕು – ಬೀಳಿಸು, ಚೆಲ್ಲು, ಹಾಯಿಸು; ವಿಷಯ ಸ್ಫುರಣಮಾಡು.
  3. (ಮುಖ ಮೊದಲಾದವನ್ನು ಸಂತೋಷ ಮೊದಲಾದವುಗಳಿಂದ) ಬೆಳಗು; ಹೊಳೆಯಿಸು; ಪ್ರಕಾಶಗೊಳಿಸು; ಪ್ರದೀಪಿಸು.
  4. ವಿಕಿರಣಿಸು; ಯಾವುದೇ ವಿಕಿರಣದ ಪ್ರಭಾವಕ್ಕೆ (ಉದಾಹರಣೆಗೆ -ಕಿರಣಗಳು, ನೇರಳಾತೀತ ವಿಕಿರಣ ಮೊದಲಾದವುಗಳಿಗೆ) ಗುರಿಪಡಿಸು, ಒಳಪಡಿಸು.