See also 2iron  3iron
1iron ಐಅರ್ನ್‍
ನಾಮವಾಚಕ
  1. (ರಸಾಯನವಿಜ್ಞಾನ) ಕಬ್ಬಿಣ; ಅಯಸ್ಸು (ಸಂಕೇತ Fe).
  2. (ರೂಪಕವಾಗಿ) ದಾರ್ಢ್ಯ; ಕಾಠಿನ್ಯ; ಸ್ಥ್ಯೆರ್ಯ; ಬಗ್ಗದಿರುವಿಕೆ: a man of iron ಉಕ್ಕಿನಂಥ ಮನುಷ್ಯ; ಕಟ್ಟಾಳು; ಸ್ಥೈರ್ಯಶಾಲಿ.
  3. ಕಬ್ಬಿಣದ – ಸಾಧನ, ಉಪಕರಣ, ಹತ್ಯಾರ: curling iron ಗುಂಗುರು ಹಣಿಗೆ; ಕುರುಳು ಹಣಿಗೆ; ಕೂದಲನ್ನು ಗುಂಗುರು ಮಾಡಲು ಬಳಸುವ ಸಾಧನ.
  4. ಇಸ್ತ್ರಿ ಪೆಟ್ಟಿಗೆ.
  5. (ಕಬ್ಬಿಣದ ತಲೆಯುಳ್ಳ) ಗಾಲ್‍ ದಾಂಡು.
  6. (ಬಹುವಚನದಲ್ಲಿ) ಬೇಡಿ; ಕೋಳ; ಸಂಕೋಲೆ.
  7. (ಸಾಮಾನ್ಯವಾಗಿ ಬಹುವಚನದಲ್ಲಿ) ರಿಕಾಪು.
  8. (ಬಹುವಚನದಲ್ಲಿ) (ಕಬ್ಬಿಣದ) ಕಾಲುಕಟ್ಟು; ಪಾದಬಂಧನಿ; ಅಂಗವಿಕಾರ ಸರಿಪಡಿಸಲು ಹಾಕುವ ಕಾಲುಕಟ್ಟು.
  9. (ಕಬ್ಬಿಣದ ಧಾತುವಿನಿಂದ ತಯಾರಿಸಿದ) ಟಾನಿಕ್ಕು; ಶಕ್ತಿವರ್ಧಕ ಔಷಧಿ: iron tablets ಕಬ್ಬಿಣದ ಗುಳಿಗೆಗಳು.
  10. (ಅಶಿಷ್ಟ) ಪಿಸ್ತೂಲು.
  11. (ಬಡಗಿಯ) ಹತ್ತರಿಯ ಅಲಗು.
  12. (ತಿಮಿಂಗಲದ ಬೇಟೆಗೆ ಬಳಸುವ) ಕಬ್ಬಿಣದ ಈಟಿ.
  13. (ಪ್ರಾಚೀನ ಪ್ರಯೋಗ) ಕತ್ತಿ; ಖಡ್ಗ.
  14. ಕಬ್ಬಿಣದ ಬರೆಗೋಲು; ಬರೆಹಾಕುವ, ಮುದ್ರೆಯೊತ್ತುವ ಕಡ್ಡಿ, ಕಂ, ಕೋಲು, ಮೊದಲಾದವು.
ಪದಗುಚ್ಛ
  1. cast iron ತಾಂಡವಾಳ; ಎರಕದ ಕಬ್ಬಿಣ; ಶೇಕಡ 2ರಿಂದ 4.5ರಷ್ಟು ಕಾರ್ಬನ್‍ ಮತ್ತು 1ರಿಂದ 4ರಷ್ಟು ಸಿಲಿಕನ್‍ ಉಳ್ಳ, ಮತ್ತು ಎರಕಕ್ಕೆ ಅನುಕೂಲವಾದ ಒಂದು ವಿಧದ ಕಬ್ಬಿಣ.
  2. wrought iron ಮೆತು ಕಬ್ಬಿಣ; ಸಾಮಾನ್ಯವಾಗಿ ಶೇಕಡ 0.1ಕ್ಕಿಂತ ಕಡಮೆ ಕಾರ್ಬನ್‍ ಉಳ್ಳ ಮತ್ತು ಸುತ್ತಿಗೆಯಿಂದ ಬಡಿದು ಮಾಡುವಂಥ ವಸ್ತುಗಳ ತಯಾರಿಕೆಗೆ ಅನುಕೂಲವಾದ ಒಂದು ವಿಧದ ಕಬ್ಬಿಣ.
ನುಡಿಗಟ್ಟು
  1. have (too) many irons in the fire ಒಂದೇ ಸಮಯದಲ್ಲಿ ಹಲವು ಹವ್ಯಾಸ ಹಚ್ಚಿಕೊಂಡಿರು; ಒಂದು ಉದ್ದೇಶ ಸಾಧನೆಗೆ ಹಲವಾರು ಸಾಧನಗಳನ್ನು, ಯೋಜನೆಗಳನ್ನು, ಉಪಾಯಗಳನ್ನು ಇಟ್ಟುಕೊಂಡಿರು.
  2. in irons ಸಂಕೋಲೆಯಲ್ಲಿ; ಕೈಬೇಡಿ ಹಾಕಿ.
  3. rod of iron ಕ್ರೂರವಾದ, ಕಠಿನವಾದ ರೀತಿ: rule with a rod of iron ಕಠಿನವಾಗಿ ಆಳು.
  4. strike while the iron is hot ಅನುಕೂಲ ಸಂದರ್ಭ ಒದಗಿದಾಗ ಕೆಲಸ ಕೈಗೂಡಿಸಿಕೊ; ಪರಿಸ್ಥಿತಿ ಅನುಕೂಲವಾಗಿರುವಾಗ ಕಾರ್ಯಸಾಧಿಸು.
  5. the iron entered into his soul (ಹಿಂಸೆ ಮೊದಲಾದವುಗಳಿಂದ) ಅವನು ಶಾಶ್ವತವಾಗಿ ಕಲ್ಲಾದ; ಅವನ ಮನಸ್ಸು ಕಬ್ಬಿಣವಾಯಿತು; ಅವನ ಹೃದಯ ಪೂರ್ತಿ ಕಲ್ಲಾಯಿತು.
See also 1iron  3iron
2iron ಐಅರ್ನ್‍
ಗುಣವಾಚಕ
  1. ಕಬ್ಬಿಣದ.
  2. ದೃಢವಾದ; ಬಹು ಗಟ್ಟಿಮುಟ್ಟಾದ.
  3. ಸಗ್ಗದ; ಅಚಲ.
  4. ನಿರ್ದಯ; ಕ್ರೂರ; ಕಠಿನ.
See also 1iron  2iron
3iron ಐಅರ್ನ್‍
ಸಕರ್ಮಕ ಕ್ರಿಯಾಪದ
  1. ಕಬ್ಬಿಣದಿಂದ ಬಲಪಡಿಸು; ಕಬ್ಬಿಣ – ಹವಣಿಸು, ತೊಡಿಸು, ಹೊದಿಸು.
  2. ಸಂಕೋಲೆ – ಹಾಕು, ತೊಡಿಸು.
  3. (ಬಟ್ಟೆ ಮೊದಲಾದವನ್ನು) ಇಸ್ತ್ರಿ ಮಾಡು.
ನುಡಿಗಟ್ಟು

iron out (ಭಿನ್ನಾಭಿಪ್ರಾಯ, ವೈಮನಸ್ಯ, ತೊಂದರೆ, ಮೊದಲಾದವನ್ನು) ಸರಿಪಡಿಸು; ಸುಗಮಗೊಳಿಸು; ತೊಡೆದುಹಾಕು; ಪರಿಹರಿಸು.