involve ಇನ್‍ವಾಲ್ವ್‍
ಸಕರ್ಮಕ ಕ್ರಿಯಾಪದ
  1. (ಒಂದನ್ನು ಮತ್ತೊಂದರಲ್ಲಿ) ಸುತ್ತು.
  2. ನಿಡುಸುರುಳಿಯಾಗಿ ಸುತ್ತು.
  3. (ಒಬ್ಬನನ್ನು ಯಾ ಒಂದು ವಿಷಯವನ್ನು ಕಷ್ಟ, ರಹಸ್ಯ, ಮೊದಲಾದವುಗಳಲ್ಲಿ) ತೊಡಗಿಸು; ಸಿಕ್ಕಿಸು.
  4. (ಒಬ್ಬನನ್ನು ಆಪಾದನೆಗೆ, ತಕ್ಸೀರಿಗೆ) ಸಿಕ್ಕಿಸು; ಸಿಕ್ಕಿಹಾಕಿಸು; ಬೀಳಿಸು.
  5. ಒಳಹೊಕ್ಕು; ಅಡಕಮಾಡಿಕೊಂಡಿರು; ಒಳಗೊಂಡಿರು; ಅಂತರ್ಗತ ಮಾಡಿಕೊಂಡಿರು.
  6. ಒಳಪಡಿಸು; ಅಂತರ್ಗತವಾಗಿಸು; ಮಾಡಿಕೊಂಡಿರು.
  7. (ಭೂತಕೃದಂತದಲ್ಲಿ) ಜಟಿಲ; ತೊಡಕಾದ; ಗೋಜುಗೋಜಾದ: an involved sentence ತೊಡಕುವಾಕ್ಯ; ಗೋಜು ವಾಕ್ಯ.