involution ಇನ್‍ವಲೂ(ಲ್ಯೂ)ಷನ್‍
ನಾಮವಾಚಕ
  1. ತೊಡಗಣೆ; ತೊಡಗಿಸುವುದು; ತೊಡಗಿರುವುದು.
  2. ಅಂತರ್ಲಗ್ನತೆ; ಅಂತರ್ನಿವಿಷ್ಟತೆ; ಒಳಸೇರಿರುವುದು; ಅಂತರ್ಗತವಾಗಿರುವುದು; ಅಂತರ್ನಿವಿಷ್ಟವಾಗಿರುವುದು.
  3. ಒಳಗೊಂಡಿರುವುದು; ಒಳಗೊಳ್ಳಿಕೆ.
  4. ತೊಡರಿಕೆ; ತೊಡರಿಕೊಳ್ಳುವುದು.
  5. ತೊಡಕು; ಸಿಕ್ಕು; ಸಂಕೀರ್ಣತೆ; ಜಟಿಲತೆ.
  6. ಅಂತರ್ವಲನ; ಒಳಸುರುಳಿಯಾಗುವುದು; ಒಳಮುಖವಾಗಿ ಸುರುಳಿಯಾಗುವುದು.
  7. (ಗಣಿತ) ಘಾತೀಕರಣ; ಒಂದು ಪರಿಮಾಣವನ್ನು ಯಾವುದೇ ಘಾತಕ್ಕೆ ಏರಿಸುವುದು.
  8. (ಶರೀರ ವಿಜ್ಞಾನ) ಸಂಕೋಚ(ನ); ಕುಗ್ಗಣೆ; ವೃದ್ಧಾಪ್ಯದಿಂದಾಗಿ ಇಲ್ಲವೆ ಅದರ ಉದ್ದೇಶ ಈಡೇರಿದ ಮೇಲೆ ಒಂದು ಅಂಗವು (ಮುಖ್ಯವಾಗಿ ಹೆರಿಗೆಯಾದ ಮೇಲೆ ಗರ್ಭಕೋಶವು) ಗಾತ್ರದಲ್ಲಿ ಚಿಕ್ಕದಾಗುವುದು, ಕುಗ್ಗುವುದು.