See also 2invite
1invite ಇನ್‍ವೈಟ್‍
ಸಕರ್ಮಕ ಕ್ರಿಯಾಪದ
  1. (ಭೋಜನಕ್ಕೆ, ಒಬ್ಬನ ಮನೆಗೆ, ಒಂದು ಸ್ಥಳ, ಸಭೆ, ಮೊದಲಾದವಕ್ಕೆ) ಕರೆ; ಆಹ್ವಾನಿಸು; ಆಮಂತ್ರಿಸು; ಬರಬೇಕೆಂದು ವಿನಂತಿಮಾಡು, ವಿನಯದಿಂದ ಕರೆ.
  2. (ಮನಸ್ಸಿಗೆ ಹಿತವೆನಿಸುವ ಯಾವುದೇ ಕೆಲಸಮಾಡಲು) ವಿನಯದಿಂದ – ಕೇಳಿಕೊ, ಪ್ರಾರ್ಥಿಸು.
  3. (ಸಲಹೆ, ಅಭಿಪ್ರಾಯ, ಆಂತರ್ಯ ವಿಚಾರ, ಮೊದಲಾದವನ್ನು) ಬೇಡು; ಸ್ವಾಗತಿಸು; ಕೊಡಬೇಕೆಂದು ವಿನಯದಿಂದ ಬೇಡಿಕೊ.
  4. (ಏನಾದರೂ ಒಂದನ್ನು, ಉದ್ದೇಶವಿಲ್ಲದೆಯೇ) ತಂದುಕೊ; ಬರಮಾಡಿಕೊ; ಉಂಟಾಗುವಂತೆ, ಬರುವಂತೆ – ಮಾಡು: invite danger by fast driving ವೇಗವಾಗಿ ವಾಹನ ನಡೆಸುವುದರಿಂದ ಅಪಾಯ ತಂದುಕೊ.
  5. ಆಕರ್ಷಿಸು; ಸೆಳೆ.
  6. (ಆಸಕ್ತಿ ಮೊದಲಾದವನ್ನು) ಹುಟ್ಟಿಸು; ಕೆರಳಿಸು; ಆಸ್ಪದಕೊಡು; ಉಂಟುಮಾಡು: the book invites interest ಆ ಪುಸ್ತಕ ಆಸಕ್ತಿಯನ್ನು ಹುಟ್ಟಿಸುತ್ತದೆ. to invite social insecurity ಸಾಮಾಜಿಕ ಅಭದ್ರತೆಗೆ ಆಸ್ಪದ ಕೊಡುವುದು.
ಅಕರ್ಮಕ ಕ್ರಿಯಾಪದ

ಆಕರ್ಷಕವಾಗಿರು.

See also 1invite
2invite ಇನ್‍ವೈಟ್‍
ನಾಮವಾಚಕ

(ಆಡುಮಾತು) ಕರೆ; ಆಹ್ವಾನ; ನಿಮಂತ್ರಣ; ಆಮಂತ್ರಣ.