See also 2invisible
1invisible ಇನ್‍ವಿಸಿಬ್‍ಲ್‍
ಗುಣವಾಚಕ
  1. (ಸ್ವಭಾವತಃ ಯಾ ಮುಚ್ಚಿಟ್ಟಿರುವುದರಿಂದ) ಕಣ್ಣು ಕಾಣಲಾಗದ; ಅಕ್ಷಿಗೋಚರವಲ್ಲದ; ಅಗೋಚರ; ಅದೃಶ್ಯ.
  2. (ಯಾವುದೋ ಒಂದು ಸಮಯದಲ್ಲಿ ಒಬ್ಬರ) ಕಣ್ಣಿಗೆ – ಕಾಣಿಸದ, ಬೀಳದ; ಅಗೋಚರ: when I called she was invisible ನಾನು ಹೋದಾಗ ಅವಳು ನನ್ನ ಕಣ್ಣಿಗೆ ಬೀಳಲಿಲ್ಲ.
  3. ಅತಿಸೂಕ್ಷ್ಮ; ಕಣ್ಣಿಗೆ ಬೀಳದಷ್ಟು ಸೂಕ್ಷ್ಮವಾದ: the invisible pores of the stone ಕಲ್ಲೊಳಗಿನ ಅತಿಸೂಕ್ಷ್ಮ ರಂಧ್ರಗಳು.
  4. ಅವ್ಯಕ್ತ; (ಮನಸ್ಸಿನ) ಗ್ರಹಿಕೆಗೆ ಸಿಕ್ಕದ: the invisible differences (ಗ್ರಹಿಕೆಗೆ ಸಿಕ್ಕದಷ್ಟು) ಸೂಕ್ಷ್ಮವಾದ ವ್ಯತ್ಯಾಸಗಳು.
  5. ಕಲಾತ್ಮಕವಾಗಿ ಮುಚ್ಚಿದ, ಅವಿಸಿದ: invisible mending ಕಲಾತ್ಮಕವಾಗಿ ಮುಚ್ಚಿದ, ಪತ್ತೆಯೇ ಆಗದಷ್ಟು ಚೆನ್ನಾಗಿ ರಿಪೇರಿ ಮಾಡಿದ (ಬಟ್ಟೆ ಮೊದಲಾದವು).
  6. (ಪ್ರಾಚೀನ ಪ್ರಯೋಗ) ಭೇಟಿಗೆ ಸಿದ್ಧವಿಲ್ಲದ; ನೋಡಲು ಬರುವವರನ್ನು ಕಾಣಲು ತಯಾರಿಲ್ಲದ.
See also 1invisible
2invisible ಇನ್‍ವಿಸಿಬ್‍ಲ್‍
ನಾಮವಾಚಕ

(the ಒಡನೆ)

  1. ಅದೃಶ್ಯಲೋಕ; ಅಗೋಚರ ಲೋಕ.
  2. ದೇವರು.