invidious ಇನ್‍ವಿಡಿಅಸ್‍
ಗುಣವಾಚಕ
  1. (ನಡತೆ ಮೊದಲಾದವುಗಳ ವಿಷಯದಲ್ಲಿ) (ನಿಜವಾದ ಯಾ ತೋರಿಕೆಯ ಅನ್ಯಾಯ ಮೊದಲಾದವುಗಳಿಂದ) ಕ್ರೋಧ, ಅಸಮಾಧಾನ ಹುಟ್ಟಿಸುವ; ಅಪ್ರೀತಿಗೆ ಕಾರಣವಾದ; ರೋಷವನ್ನುಂಟುಮಾಡುವ.
  2. (ವಸ್ತುವಿನ ವಿಷಯದಲ್ಲಿ ಅದನ್ನುಳ್ಳವನ ಬಗ್ಗೆ) ಅಸೂಯೆ ಉಂಟುಮಾಡುವ; ಮತ್ಸರ ಹುಟ್ಟಿಸುವ.
  3. (ಅಹಿತಕರವಾಗಿ, ಅನ್ಯಾಯವಾಗಿ) ತಾರತಮ್ಯ ಮಾಡುವ; ಭೇದ ಬುದ್ಧಿಯ; ಪಕ್ಷಪಾತದ: invidious comparisons ನ್ಯಾಯವಾಗಿರದ ಹೋಲಿಕೆಗಳು.