investigative ಇನ್‍ವೆಸ್ಟಿಗಟಿವ್‍
ಗುಣವಾಚಕ
  1. ಶೋಧಕ; ಪರೀಕ್ಷಾತ್ಮಕ; ತನಿಖೆ ನಡೆಸಬಲ್ಲ; ವಿಚಾರಣೆ ಮಾಡಿ ನೋಡುವ (ಪ್ರವೃತ್ತಿಯ): investigative scientist ಶೋಧಕ ವಿಜ್ಞಾನಿ; ಪರೀಕ್ಷಿಸಿ ನೋಡುವ ಪ್ರವೃತ್ತಿಯುಳ್ಳ ವಿಜ್ಞಾನಿ.
  2. ಪರೀಕ್ಷಕ; ಪರೀಕ್ಷೆಯ; ವಿಚಾರಣೆಯ; ತನಿಖೆಗೆ ಸಂಬಂಧಿಸಿದ: investigative power ಪರೀಕ್ಷಕ ಯಾ ಪರೀಕ್ಷಣ ಅಧಿಕಾರ.
  3. (ಪತ್ರಿಕೋದ್ಯಮದ ವಿಷಯದಲ್ಲಿ) (ವಿವಾದಾಸ್ಪದ ವಿಷಯಗಳನ್ನು) ತೀವ್ರವಾಗಿ ಪರಿಶೀಲಿಸುವ; ತನಿಖೆ ಮಾಡುವ; ತನಿಖಾತ್ಮಕ.