invest ಇನ್‍ವೆಸ್ಟ್‍
ಸಕರ್ಮಕ ಕ್ರಿಯಾಪದ
  1. ಬಟ್ಟೆ – ತೊಡಿಸು, ಉಡಿಸು: the coat invested his ample person ಅಂಗಿ ಅವನ ಸ್ಥೂಲಕಾಯವನ್ನು ಮುಚ್ಚಿತು.
  2. (ಬಟ್ಟೆಯಂತೆ) ಹೊದಿಸು; ಮುಚ್ಚು; ಆಚ್ಛಾದಿಸು; ಪರಿವೇಷ್ಟಿಸು; ಅಲಂಕರಿಸು: invests a common murder story with Aeschylian mystery ಸಾಮಾನ್ಯ ಕೊಲೆಯ ಕಥೆಗೆ ಈಸ್ಕಿಲಸ್‍ ನಾಟಕದ ರಹಸ್ಯದ ಹೊದಿಕೆ ಹೊದಿಸುತ್ತದೆ.
  3. (ಒಬ್ಬನಿಗೆ ಅಧಿಕಾರ, ಲಾಂಛನ, ಹುದ್ದೆ, ಮೊದಲಾದವನ್ನು) ವಹಿಸಿಕೊಡು; ಪ್ರದಾನ ಮಾಡು; ಅಧಿಕಾರದಲ್ಲಿ – ಪ್ರತಿಷ್ಠಾಪಿಸು, ನಿಯುಕ್ತಗೊಳಿಸು.
  4. (ಒಬ್ಬನ, ಒಂದರ ಮೇಲೆ) ಗುಣಾತಿಶಯ – ಹೊರಿಸು, ಆರೋಪಿಸು: invest the commonplace with significance ಸಾಮಾನ್ಯವಾದುದಕ್ಕೆ ಮಹತ್ವವನ್ನು ಆರೋಪಿಸು.
  5. ಮುತ್ತಿಗೆ ಹಾಕು; ಘೇರಾಯಿಸು: invest the town on the land side ಭೂಪ್ರದೇಶದ ಕಡೆಯಿಂದ ನಗರವನ್ನು ಮುತ್ತು.
  6. (ಋಣ ಸಂಚಯ, ಸರ್ಕಾರದ ಸಾಲಪತ್ರ, ಮೊದಲಾದವುಗಳಲ್ಲಿ) ಹಣ – ವಿನಿಯೋಗಿಸು, ಹಾಕು, ತೊಡಗಿಸು.
ಅಕರ್ಮಕ ಕ್ರಿಯಾಪದ
  1. ಹಣ – ತೊಡಗಿಸು, ಹಾಕು; ಬಂಡವಾಳ ಹೂಡು.
  2. (ಆಡುಮಾತು) (ಒಂದಕ್ಕಾಗಿ, ಒಂದರ ಮೇಲೆ) ಹಣ ಹಾಕು; ಕೊಳ್ಳು; ಖರೀದಿಸು: invest in a new car ಹೊಸ ಕಾರು ಕೊಂಡುಕೊ; ಹೊಸ ಕಾರಿಗೆ ಹಣ ಹಾಕು.