See also 2invert
1invert ಇನ್‍ವರ್ಟ್‍
ಸಕರ್ಮಕ ಕ್ರಿಯಾಪದ
  1. ತಲೆಕೆಳಗು ಮಾಡು; ಬೋರಲು ಹಾಕು; ಮಗುಚು; ಕವುಚಿಹಾಕು; ಕವುಚು.
  2. (ಸ್ಥಾನ, ಕ್ರಮ, ಸಂಬಂಧ – ಇವುಗಳನ್ನು) ಹಿಂದುಮುಂದು ಮಾಡು; ವ್ಯತ್ಯಯ ಮಾಡು; ವಿಪರ್ಯಯಗೊಳಿಸು.
  3. (ಸಂಗೀತ) ವಿಲೋಮ ಮಾಡು; ಆರೋಹಣ ಕ್ರಮದಲ್ಲಿರುವ ಸ್ವರಗಳನ್ನು ಅವರೋಹಣ ಕ್ರಮಕ್ಕೆ ತರು ಯಾ ಅವರೋಹಣದಲ್ಲಿರುವುದನ್ನು ಅರೋಹಣ ಕ್ರಮಕ್ಕೆ ತರು.
  4. (ರಸಾಯನವಿಜ್ಞಾನ) ಸುಕ್ರೋಸ್‍ ಅನ್ನು ಜಲವಿಭಜನೆ ಮಾಡಿ ಗ್ಲೂಕೋಸ್‍ ಲೀವ್ಯುಲೋಸ್‍ ಮಿಶ್ರಣವಾಗಿ ಪರಿವರ್ತಿಸು.
See also 1invert
2invert ಇನ್‍ವರ್ಟ್‍
ನಾಮವಾಚಕ
  1. (ಗ್ರಾಮಸಾರದ ಚರಂಡಿಯ ತಳಭಾಗದಲ್ಲಿರುವಂಥ) ತಲೆಕೆಳಗು ಕಮಾನು.
  2. ಸಲಿಂಗಕಾಮಿ.