inversion ಇನ್‍ವರ್ಷನ್‍
ನಾಮವಾಚಕ
  1. ತಲೆಕೆಳಗು ಮಾಡುವುದು.
  2. ತಿರುಗುಮುರುಗು; ವಿಪರ್ಯಯ; ವ್ಯತ್ಯಯ; ಸ್ಥಾನ, ಕ್ರಮ, ಸಂಬಂಧ – ಇವು ಹಿಂದು ಮುಂದಾಗಿರುವುದು.
  3. (ಮುಖ್ಯವಾಗಿ ವ್ಯಾಕರಣದ ಪದಕ್ರಮದಲ್ಲಿ, ಆಲಂಕಾರಿಕ ಪರಿಣಾಮಕ್ಕಾಗಿ) ಕ್ರಮವ್ಯತ್ಯಯ; ಪದಕ್ರಮ, ಶಬ್ದ – ವಿಪರ್ಯಯ (ಉದಾಹರಣೆಗೆ how beautiful is the rose ಎಂಬಲ್ಲಿ ಕರ್ತೃಪದ ವಿಪರ್ಯಯವಾಗಿದೆ).
  4. (ಗಣಿತ) ವಿಲೋಮಕ್ರಿಯೆ; ವಿಲೋಮಕರಣ; ವಿಲೋಮ ಮಾಡುವುದು; (ಯಾವುದೇ ಪ್ರಮಾಣವನ್ನು) ಹಿಂದುಮುಂದು ಮಾಡುವುದು.
  5. (ಸಂಗೀತ)
    1. ವಿಲೋಮಕ್ರಿಯೆ; ಸ್ವರ – ವ್ಯತ್ಯಯ, ವಿಪರ್ಯಯ; ಆರೋಹಣ ಕ್ರಮದಲ್ಲಿರುವ ಸ್ವರಗಳನ್ನು ಅವರೋಹಣ ಕ್ರಮಕ್ಕೆ ಯಾ ಅವರೋಹಣದಲ್ಲಿರುವುದನ್ನು ಆರೋಹಣ ಕ್ರಮಕ್ಕೆ ತರುವುದು.
    2. ಹಾಗೆ ಮಾಡಿದ್ದು.
  6. ಸಲಿಂಗಕಾಮುಕತೆ.
  7. ವಿಲೋಮನ:
    1. (ಪವನಶಾಸ್ತ್ರ) ಔನ್ನತ್ಯದೊಂದಿಗೆ ತಾಪ ವ್ಯತ್ಯಾಸವಾಗುವ ಕ್ರಮ ಹಿಂದುಮುಂದಾಗುವಿಕೆ.
    2. (ರಸಾಯನವಿಜ್ಞಾನ) ಧ್ರುವೀಕೃತ ಬೆಳಕಿನ ಧ್ರುವೀಕರಣ ಸಮತಲ ಎಡಕ್ಕೆ ತಿರುಗುತ್ತಿದ್ದುದು ಬಲಕ್ಕೆ ಯಾ ಬಲಕ್ಕೆ ತಿರುಗುತ್ತಿದ್ದುದು ಎಡಕ್ಕೆ ತಿರುಗುವುದು.
    3. (ರಸಾಯನವಿಜ್ಞಾನ) (ಕಬ್ಬಿನ ಸಕ್ಕರೆ ಕುರಿತಂತೆ) ಜಲವಿಭಜನೆ ಹೊಂದಿ ಗ್ಲೂಕೋಸ್‍ ಮತ್ತು ಹ್ರಕ್ಟೋಸ್‍ಗಳ ಮಿಶ್ರಣವಾಗುವುದು.