invention ಇನ್‍ವೆನ್ಷನ್‍
ನಾಮವಾಚಕ
  1. (ಹೊಸ ವಿಧಾನ, ಉಪಕರಣ, ಮೊದಲಾದವನ್ನು) ಯೋಜಿಸುವುದು; ಕಲ್ಪಿಸುವುದು; ಸೃಷ್ಟಿಮಾಡುವುದು; ನಿರ್ಮಾಣ; ನಿರ್ಮಿತಿ; ಸೃಷ್ಟನೆ; ಆವಿಷ್ಕರಣ; ಯೋಜನೆ; ಸೃಜನೆ.
  2. ಆವಿಷ್ಕಾರ; ನೂತನ ಸೃಷ್ಟಿ; ಹೊಸದಾಗಿ ಸೃಷ್ಟಿಯಾದ ಯಂತ್ರ ಮೊದಲಾದವು.
  3. (ನ್ಯಾಯಶಾಸ್ತ್ರ) (ಸ್ವಾಮ್ಯ ಪತ್ರದಲ್ಲಿ ನಮೂದಿಸಿರದ) ಹೊಸ ತಯಾರಿಕೆ.
  4. ಸುಳ್ಳುಕಥೆ; ಹುಟ್ಟಿಸಿದ, ಸೃಷ್ಟಿಸಿದ ಕಥೆ.
  5. ಸೃಷ್ಟಿಕುಶಲತೆ; ನಿರ್ಮಾಣ ಕೌಶಲ; ಸೃಜನಚಾತುರ್ಯ.
  6. (ಸಂಗೀತ) ಸರಳ ಭಾವನೆಯೊಂದನ್ನು ಬೆಳೆಸುವ, ಕೀಲಿಕೈ ಮಣೆಯ ವಾದ್ಯಗಳಿಂದ ನುಡಿಸಲು ಅನುಕೂಲವಾಗುವಂತೆ ರಚಿಸಿರುವ, ಕಿರು ಸಂಗೀತಕೃತಿ; ಕೀಲಿವಾದ್ಯದ ಕಿರುಕೃತಿ.
ಪದಗುಚ್ಛ

Invention of the Cross

  1. ಶಿಲುಬೆಪ್ರಾಪ್ತಿ; ಕ್ರಿಸ್ತಶಕ 326ರಲ್ಲಿ ಕಾನ್‍ಸ್ಟಾಂಟೈನ್‍ ಚಕ್ರವರ್ತಿಯ ತಾಯಿಯಾದ ಹೆಲನಳಿಗೆ ಶಿಲುಬೆಯು ದೊರೆತದ್ದು.
  2. ಈ ಘಟನೆಯ ಹಬ್ಬ (ಮೇ 3ನೇ ತಾರೀಖು); ಶಿಲುಬೆಪ್ರಾಪ್ತಿಯ ಉತ್ಸವ.