See also 2invalid  3invalid  4invalid
1invalid ಇನ್‍ವಲಿ()ಡ್‍
ನಾಮವಾಚಕ

(ಕಾಯಿಲೆಯಿಂದಲೋ, ಗಾಯ ಮೊದಲಾದವುಗಳಿಂದಲೋ) ಅಶಕ್ತ; ನಿಶ್ಯಕ್ತ; ದುರ್ಬಲ; ಅಸಮರ್ಥನಾದವನು; ಬಲಹೀನನಾದವನು; ಶಕ್ತಿಯಿಲ್ಲದಾಗಿರುವವನು; ಕೆಲಸಮಾಡಲಾರದಂತಾಗಿರುವವನು.

See also 1invalid  3invalid  4invalid
2invalid ಇನ್‍ವಲಿ()ಡ್‍
ಗುಣವಾಚಕ
  1. (ಕಾಯಿಲೆಯಿಂದಲೋ, ಗಾಯ ಮೊದಲಾದವುಗಳಿಂದಲೋ) ಅಸಮರ್ಥ(ನಾದ); ಅಶಕ್ತ; ದುರ್ಬಲ; ಬಲಹೀನ(ನಾದ); ನಿಶ್ಯಕ್ತ; ನಿತ್ರಾಣನಾದ; ಕೆಲಸ ಮಾಡಲಾರದಂತಾಗಿರುವ: caring for her invalid mother ದುರ್ಬಲಳಾಗಿರುವ ಅವಳ ತಾಯಿಯ ಆರೈಕೆ ಮಾಡುತ್ತಾ.
  2. ಅಶಕ್ತರ; ದುರ್ಬಲರಿಗಾಗಿ ಇರುವ: invalid car ದುರ್ಬಲರ ಕಾರು, ಗಾಡಿ. invalid diet ದುರ್ಬಲರ ಆಹಾರಕ್ರಮ, ಪಥ್ಯ.
See also 1invalid  2invalid  4invalid
3invalid ಇನ್‍ವಲಿ()ಡ್‍
ಸಕರ್ಮಕ ಕ್ರಿಯಾಪದ
  1. (ಸಾಮಾನ್ಯವಾಗಿ ಕರ್ಮಣ್ಯರ್ಥದಲ್ಲಿ) (ರೋಗದಿಂದ ಮನುಷ್ಯನನ್ನು):
    1. ಮಲಗಿಸಿಬಿಡು; ಹಾಸಿಗೆ ಹಿಡಿಸಿಬಿಡು.
    2. ಅಸಮರ್ಥಗೊಳಿಸು; ನಿಶ್ಯಕ್ತನನ್ನಾಗಿಸು; ನಿತ್ರಾಣಗೊಳಿಸು; ಬಲಹೀನವಾಗಿಸು; ಶಕ್ತಿಯೇ ಇಲ್ಲದಂತಾಗಿಸು; ಯಾವ ಕೆಲಸವನ್ನೂ ಮಾಡಲಾರದಂತಾಗಿಸು.
  2. ರೋಗಿಯೆಂದು ಯಾ ದುರ್ಬಲನೆಂದು ಪರಿಗಣಿಸು; ರೋಗಾದಿಗಳಿಂದ ಅಸಮರ್ಥನೆಂದು ಗಣನೆಮಾಡು.
  3. ಯುದ್ಧ ರಂಗದ ಸೇವಾವೃತ್ತಿಯಿಂದ – ತೆಗೆದುಹಾಕು, ನಿವೃತ್ತಿಗೊಳಿಸು; ರೋಗಿ ಯಾ ಗಾಯಗೊಂಡವನು ಎಂಬ ಕಾರಣ ಯುದ್ಧರಂಗದಿಂದ (ಮನೆಗೆ) ಹಿಂದಕ್ಕೆ ಕಳುಹಿಸಿಬಿಡು.
ಅಕರ್ಮಕ ಕ್ರಿಯಾಪದ
  1. (ರೋಗಾದಿಗಳಿಂದ) ಅಸಮರ್ಥನಾಗು; ಬಲಹೀನನಾಗು.
  2. ರೋಗಿಗಳ ಪಟ್ಟಿಗೆ – ಸೇರು, ಸೇರಿಹೋಗು, ಸೇರಿಬಿಡು.
See also 1invalid  2invalid  3invalid
4invalid ಇನ್‍ವಲಿ()ಡ್‍
ಗುಣವಾಚಕ
  1. ಅನೂರ್ಜಿತ; ಊರ್ಜಿತವಾಗದ; ನಿಲ್ಲದ; ಅಸಿಂಧು; ಸಿಂಧುವಾಗದ; ಅಮಾನ್ಯ; ನ್ಯಾಯದ, ಕಾಯಿದೆಯ ಆಧಾರವಿಲ್ಲದ, ಮಾನ್ಯತೆಯಿಲ್ಲದ ಯಾ ಬಲವಿಲ್ಲದ.
  2. (ತರ್ಕಶಾಸ್ತ್ರ) ಅಸಿದ್ಧ; ನಿಷ್ಪ್ರಮಾಣಕ; ತರ್ಕಪ್ರಾಮಾಣ್ಯವಿಲ್ಲದ; ತಾರ್ಕಿಕವಾಗಿ ಸಿದ್ಧವಾಗದ.
  3. (ಯಾವುದೇ) ಶಾಸ್ತ್ರಪ್ರಾಮಾಣ್ಯವಿಲ್ಲದ; ಸಮರ್ಥಿಸಲಾಗದ; ಅಸಮರ್ಥನೀಯ; ಶಾಸ್ತ್ರಸಮ್ಮತವಲ್ಲದ.