intussusception ಇನ್‍ಟಸ್‍ಸಸೆಪ್ಷನ್‍
ನಾಮವಾಚಕ
  1. (ವೈದ್ಯಶಾಸ್ತ್ರ) ಅನ್ಯಗ್ರಹಣ; ಅನ್ಯವಸ್ತುಗ್ರಹಣ; ಅನ್ಯವಸ್ತುವನ್ನು ತೆಗೆದುಕೊಂಡು ಜೀವಿಯು ದೇಹದ ಊತಕವಾಗಿ ಮೈಗೂಡಿಸಿಕೊಳ್ಳುವುದು.
  2. (ಭಾವನೆಗಳು ಮೊದಲಾದವನ್ನು) ಗ್ರಹಿಸುವುದು; ಅಂಗೀಕರಿಸುವುದು; ಅಂತರ್ಗತ ಮಾಡಿಕೊಳ್ಳುವುದು.
  3. ಅಂತಃಪ್ರವೇಶ; ಅಂತಸ್ಸರಣ; ಪ್ರವೇಶನ; ಕರುಳಿನ ಒಂದು ಭಾಗ ಮತ್ತೊಂದು ಭಾಗದೊಳಕ್ಕೆ ಸೇರಿಕೊಳ್ಳುವುದು, ತೂರಿಕೊಳ್ಳುವುದು.
  4. (ಸಸ್ಯವಿಜ್ಞಾನ) ಇಂಟಸಸೆಪ್ಷನ್‍; ಕಣಾಧಾನ; ಕಣ ನಿಕ್ಷೇಪ; ಜೀವಕೋಶದ ಮೇಲ್ಮೈಪ್ರದೇಶವನ್ನು ಹೆಚ್ಚಿಸಲು ಜೀವಕೋಶ ಭಿತ್ತಿಯ ಮೇಲೆ ಹೊಸ ಸೆಲ್ಯುಲೋಸ್‍ ಕಣಗಳು ಸಂಗ್ರಹವಾಗುವುದು.