intuitionism ಇನ್‍ಟ್ಯೂಇಷನಿಸಮ್‍
ನಾಮವಾಚಕ
  1. ಪ್ರತ್ಯಕ್ಷ ಜ್ಞಾನವಾದ; ಇಂದ್ರಿಯಜನ್ಯ ಜ್ಞಾನವಾದ.
  2. ಒಳಗಾಣ್ಕೆ ವಾದ; ಅಂತರ್ಬೋಧವಾದ; ಪ್ರತ್ಯಕ್ಷ ವೀಕ್ಷಣದಲ್ಲಿ ಬಾಹ್ಯ ವಸ್ತುಗಳ ಸತ್ಯಸ್ವರೂಪವು ನೇರವಾಗಿ ಅಂತರ್ಬೋಧೆಯ ಸಹಾಯದಿಂದಲೇ ಅರಿವಾಗುತ್ತದೆ ಎಂದು ಪ್ರತಿಪಾದಿಸುವ ಸಿದ್ಧಾಂತ.
  3. = intuitionalism.
  4. (ನೀತಿಶಾಸ್ತ್ರ) ಅಂತರ್ಬೋಧ ಸಿದ್ಧಾಂತ; ನಾವು ಮಾಡುವ ಕರ್ಮಗಳು ಪುಣ್ಯಕರ್ಮಗಳೆ, ಪಾಪಕರ್ಮಗಳೆ ಎಂಬುದನ್ನೂ, ಮೂಲಭೂತವಾದ ಪಾಪಪುಣ್ಯಗಳ ಅರಿವನ್ನೂ ಅಂತರ್ಬೋಧೆಯಿಂದಲೇ ಪಡೆಯಲು ಸಾಧ್ಯವೆಂದು ಪ್ರತಿಪಾದಿಸುವ ಸಿದ್ಧಾಂತ.