intrusion ಇನ್‍ರ್ಟೂಷನ್‍
ನಾಮವಾಚಕ
  1. (ವಸ್ತುವನ್ನು ಬಲವಂತದಿಂದ) ಒಳಕ್ಕೆ – ತುರುಕುವುದು, ನೂಕುವುದು; ಒಳನುಗ್ಗಿಸುವುದು.
  2. (ವಸ್ತುವನ್ನು ಬಲವಂತವಾಗಿ ಒಬ್ಬನ ಮೇಲೆ) ಹೇರುವುದು; ಹೊರಿಸುವುದು.
  3. ಜುಲುಂ ಪ್ರವೇಶ; ಬಲವಂತವಾಗಿ ಒಳಕ್ಕೆ ನುಗ್ಗುವುದು, ಬರುವುದು.
  4. (ಕರೆಯದೆ ಒಬ್ಬನ ಏಕಾಂತದಲ್ಲಿ ಯಾ ವ್ಯವಹಾರದಲ್ಲಿ) ತಲೆಹಾಕುವುದು; ಮಧ್ಯೆ ಪ್ರವೇಶಿಸುವುದು; ನಡುವೆ ನುಗ್ಗುವುದು.
  5. (ಭೂವಿಜ್ಞಾನ) ಅಂತಸ್ಸರಣ; ಸ್ತರಗಳ ಮಧ್ಯೆ ಕರಗಿದ ಶಿಲೆ ನುಗ್ಗುವುದು.
  6. ತನಗೆ ಹಕ್ಕಿಲ್ಲದ ಖಾಲಿ ಸ್ಥಿರಾಸ್ತಿ ಮೊದಲಾದವುಗಳನ್ನು ಆಕ್ರಮಿಸಿಕೊಳ್ಳುವುದು; ಅನಧಿಕೃತ ಆಕ್ರಮಣ.
  7. (ಚರಿತ್ರೆ) ಚರ್ಚ್‍ ಆಹ್‍ ಸ್ಕಾಟ್ಲೆಂಡ್‍ಗೆ ಆ ಚರ್ಚಿನ ಅನುಯಾಯಿಗಳ ಇಷ್ಟಕ್ಕೆ ವಿರುದ್ಧವಾಗಿ ಮಿನಿಸ್ಟರ್‍ ಪದಾಧಿಕಾರಿಯನ್ನು ನೇಮಕ ಮಾಡುವುದು; ಅಸಮ್ಮತ ನೇಮಕ.