1introvert ಇನ್‍ಟ್ರವರ್ಟ್‍
ನಾಮವಾಚಕ
  1. (ಮನಶ್ಶಾಸ್ತ್ರ) ಅಂತರ್ಮುಖಿ; ತನ್ನದೇ ಆದ ಅಲೋಚನೆಗಳು ಮತ್ತು ಭಾವನೆಗಳಲ್ಲಿ ಮುಳುಗಿ ಹೊರಗಿನ ವಿಷಯ ಯಾ ವಸ್ತುಗಳ ಬಗ್ಗೆ ಆಸಕ್ತಿಯಿಲ್ಲದವನು.
  2. ಏಕಾಂತಪ್ರಿಯ; ಏಕಾಂತಿ; ಇತರರೊಡನೆ ಬೆರೆಯದೆ ತನ್ನಷ್ಟಕ್ಕೆ ತಾನೇ ಇರುವ, ಸಂಕೋಚ ಸ್ವಭಾವದ ವ್ಯಕ್ತಿ.
2introvert ಇನ್‍ಟ್ರವರ್ಟ್‍
ಗುಣವಾಚಕ

(ವ್ಯಕ್ತಿಯ ವಿಷಯದಲ್ಲಿ) ಅಂತರ್ಮುಖಿಯ; ಅಂತರ್ಮುಖಿಯ ಸ್ವಭಾವದ.

3introvert ಇನ್‍ಟ್ರವರ್ಟ್‍
ಸಕರ್ಮಕ ಕ್ರಿಯಾಪದ
  1. (ಮನಸ್ಸನ್ನು, ಆಲೋಚನೆಯನ್ನು) ಒಳತಿರುವು; ಒಳಮುಖಗೊಳಿಸು; ಅಂತರ್ಮುಖಮಾಡು; ಒಳಕ್ಕೆ ತಿರುಗಿಸು.
  2. (ಮುಖ್ಯವಾಗಿ ಪ್ರಾಣಿವಿಜ್ಞಾನ) ಅಂತಃಕರ್ಷಿಸು; ಒಳಸೆಳೆದುಕೊ; (ಅಂಗ ಮೊದಲಾದವನ್ನು) ಒಳಕ್ಕೆಳೆದುಕೊ.