introduction ಇನ್‍ಟ್ರಡಕ್‍ಷನ್‍
ನಾಮವಾಚಕ
  1. ಪ್ರವೇಶನ; ಒಳಗೆ, ಒಳಕ್ಕೆ ತರುವುದು.
  2. ಅಂತರ್ನಿವೇಶನ; ಒಳಗೆ, ಒಳಕ್ಕೆ ಇಡುವುದು, ಸೇರಿಸುವುದು; ಒಳಹೊಗಿಸುವುದು.
  3. ಒಳಕ್ಕೆ ಸೇರಿಸಿದ – ವಸ್ತು, ವಿಷಯ.
  4. (ಪದ್ಧತಿ, ಭಾವನೆ, ಸುಧಾರಣೆ, ಮೊದಲಾದವನ್ನು) ಬಳಕೆಗೆ, ಆಚರಣೆಗೆ ತರುವುದು; ಚಾಲ್ತಿಗೊಳಿಸುವುದು.
  5. (ವಿಷಯ ಮೊದಲಾದವನ್ನು) ಮುಂದಿಡುವುದು; ಮುಂದೊಡ್ಡುವುದು; ಸೂಚಿಸುವುದು; ಮಂಡಿಸುವುದು; ಮಂಡನೆ.
  6. (ಪುಸ್ತಕ, ಭಾಷಣ, ಮೊದಲಾದವುಗಳ ಪ್ರಾರಂಭದಲ್ಲಿ ಮಾಡುವ ಯಾ ಸೇರಿಸುವ) ಪ್ರಸ್ತಾವನೆ; ಉಪೋದ್ವಾತ; ಭೂಮಿಕೆ; ಪೀಠಿಕೆ; ವಿಷಯದ ಪರಿಚಯ.
  7. ಕೈಪಿಡಿ; ವಿಷಯವನ್ನು ಪರಿಚಯ ಮಾಡಿಕೊಡುವ ಪ್ರಾಥಮಿಕ ಗ್ರಂಥ.
  8. (ಒಬ್ಬನನ್ನು ಇನ್ನೊಬ್ಬನಿಗೆ) ವಿಧ್ಯುಕ್ತವಾಗಿ ಪರಿಚಯ ಮಾಡಿಕೊಡುವುದು; ವಿಧ್ಯುಕ್ತ ಪರಿಚಯ, ಸಾಂಪ್ರದಾಯಿಕ ಪರಿಚಯ.
  9. (ವರಿಷ್ಠವರ್ಗದ ತರುಣಿಯನ್ನು) ಆಢ್ಯ ಸಮಾಜಕ್ಕೆ ಪರಿಚಯಿಸುವುದು, ಪ್ರವೇಶಗೊಳಿಸುವುದು.
  10. (ಮಸೂದೆ ಮೊದಲಾದವನ್ನು) ಶಾಸನಸಭೆಯಲ್ಲಿ – ಮಂಡಿಸುವುದು; ಮಂಡನೆ.
  11. ಪರಿಚಯ ಪತ್ರ.
ಪದಗುಚ್ಛ

letter of introduction = introduction(11).