introduce ಇನ್‍ಟ್ರಡ್ಯೂಸ್‍
ಸಕರ್ಮಕ ಕ್ರಿಯಾಪದ
  1. ಒಳಗೆ ತರು; ಪ್ರವೇಶಗೊಳಿಸು; ಒಳಕ್ಕೆ ತರು.
  2. ಒಳಗಿಡು; ಒಳಕ್ಕಿಡು; ಒಳಹೊಗಿಸು; ಒಳಕ್ಕೆ ಸೇರಿಸು.
  3. (ಪದ್ಧತಿ, ಭಾವನೆ, ಸುಧಾರಣೆ, ಮೊದಲಾದವನ್ನು) ಬಳಕೆಗೆ, ಚಾಲ್ತಿಗೆ, ಜಾರಿಗೆ, ರೂಢಿಗೆ, ಆಚರಣೆಗೆ ತರು.
  4. (ವಿಷಯ ಮೊದಲಾದವನ್ನು) ಮುಂದೊಡ್ಡು; ಮಂಡಿಸು; ಸೂಚಿಸು; ಮುಂದಿಡು.
  5. ಉಪಕ್ರಮಿಸು; ಪ್ರಾರಂಭಿಸು.
  6. ಮುಂದಾಗು; ಆರಂಭದಲ್ಲಿರು; ಯಾವುದೇ ಒಂದು ಆರಂಭವಾಗುವುದಕ್ಕೆ ಮುನ್ನ ಆಗು, ಜರುಗು.
  7. (ಒಬ್ಬನನ್ನು ಇನ್ನೊಬ್ಬನಿಗೆ, ಮುಖ್ಯವಾಗಿ ಸಾಂಪ್ರದಾಯಿಕ ರೀತಿಯಲ್ಲಿ) ಪರಿಚಯಗೊಳಿಸು; ಪರಿಚಯ ಮಾಡಿಕೊಡು.
  8. (ವರಿಷ್ಠವರ್ಗದ ತರುಣಿಯನ್ನು) ಆಢ್ಯ ಸಮಾಜಕ್ಕೆ – ವಿಧ್ಯುಕ್ತವಾಗಿ ಪರಿಚಯಗೊಳಿಸು, ಪ್ರವೇಶಗೊಳಿಸು.
  9. (ಪ್ರಕೃತ ವಿಷಯಕ್ಕೆ ಮೊದಲಬಾರಿಗೆ ಒಬ್ಬನ) ಗಮನ ಸೆಳೆ, ಹರಿಸು.
  10. (ಮಸೂದೆ ಮೊದಲಾದವನ್ನು) ಶಾಸನಸಭೆಯಲ್ಲಿ ಮಂಡಿಸು; ಸಂಸತ್ತಿನಲ್ಲಿ ತರು.
  11. (ಆಕಾಶವಾಣಿಯ ಕಾರ್ಯಕ್ರಮ ಮೊದಲಾದವನ್ನು) ಶ್ರೋತೃಗಳ, ವೀಕ್ಷಕರ ಎದುರು ಪ್ರದರ್ಶಿಸು.