into ಇಂಟು(ಟ)
ಉಪಸರ್ಗ
  1. (ರೂಪಕವಾಗಿ ಸಹ) (ಒಂದು ವಸ್ತುವಿನ, ಒಂದು ಬಿಂದುವಿನ ಕಡೆಗೆ ಚಲನೆಯ ದಿಕ್ಕನ್ನು ತೋರಿಸುವಾಗ) ಒಳಕ್ಕೆ; ಒಳಗಡೆಗೆ; ಅಂತಃ – : come into the garden ತೋಟದೊಳಕ್ಕೆ ಬಾ. throw it into the fire ಬೆಂಕಿಗೆ ಬಿಸಾಡು. 4 (divided) into $20=5$ ನಾಲ್ಕಾಗಿ ವಿಭಾಗಿಸಿದ $20=5$.
  2. (ಬದಲಾವಣೆ, ಸ್ಥಿತಿ, ಪರಿಣಾಮ – ಇವನ್ನು ತಿಳಿಸುವಾಗ) ಒಂದಕ್ಕೆ; ರೂಪಕ್ಕೆ; ರೂಪವಾಗಿ: turn stones into gold ಕಲ್ಲುಗಳನ್ನು ಚಿನ್ನಕ್ಕೆ, ಹೊನ್ನಿಗೆ – ತಿರುಗಿಸು. translate into English ಇಂಗ್ಲಿಷಿಗೆ ಭಾಷಾಂತರಿಸು. grow into an adult ವಯಸ್ಕನಾಗಿ ಬೆಳೆ. collect them into heaps ಅವನ್ನು ರಾಶಿಗಳಾಗಿ ಶೇಖರಿಸು. divide them into three classes ಅವನ್ನು ಮೂರು ವರ್ಗಗಳಾಗಿ ವಿಭಾಗಿಸು. flogged into submission ಶರಣಾಗುವಂತೆ, ಶರಣಾಗುವವರೆಗೂ ಕೊರಡಿನಿಂದ ಬಡಿದು.
  3. (ಆಡುಮಾತು) ಆಸಕ್ತಿಯಿರುವ; ತಿಳಿದಿರುವ: is really into art ನಿಜವಾಗಿಯೂ ಕಲೆಯಲ್ಲಿ ಆಸಕ್ತಿಯಿದೆ.
ನುಡಿಗಟ್ಟು
  1. come into property ಆಸ್ತಿಯನ್ನು ಪಡೆ.
  2. get into trouble ತೊಂದರೆಗೆ ಬೀಳು, ಸಿಕ್ಕಿಕೊ.
  3. inquire into it ಅದನ್ನು ತನಿಖೆಮಾಡು.
  4. look into the future ಭವಿಷ್ಯ ತಿಳಿ, ಊಹಿಸು.
  5. look into the matter ಈ ವಿಷಯವನ್ನು ಪರಿಶೀಲಿಸು.
  6. run into a pillar ಕಂಬಕ್ಕೆ ಡಿಕ್ಕಿ ಹೊಡೆ.
  7. watch far into the night ರಾತ್ರಿ ಸರಿಹೊತ್ತಿನವರೆಗೂ
    1. ಕಾವಲಿರು.
    2. ವೀಕ್ಷಿಸುತ್ತಿರು: he watched the heavens far into the night ರಾತ್ರಿ ಸರಿವೇಳೆಯವರೆಗೂ ಅವನು ಆಕಾಶವನ್ನು ವೀಕ್ಷಿಸುತ್ತಲೇ ಇದ್ದ.