See also 2intimate  3intimate
1intimate ಇಂಟಿಮಟ್‍
ಗುಣವಾಚಕ
  1. ಸುಪರಿಚಿತ; ಸಲಿಗೆಯ; ಬಹಳ ಬಳಕೆಯ; ಹತ್ತಿರ ಪರಿಚಯದ: intimate friend ಸಲಿಗೆಯ ಗೆಳೆಯ.
  2. ಅನ್ಯೋನ್ಯ; ಆಪ್ತ; ಆತ್ಮೀಯ: intimate friendship ಆತ್ಮೀಯ ಸ್ನೇಹ.
  3. (ಸಂಬಂಧ ಮೊದಲಾದವುಗಳ ವಿಷಯದಲ್ಲಿ) ನಿಕಟ; ಹತ್ತಿರದ: intimate connexion ಹತ್ತಿರದ, ನಿಕಟ – ಸಂಬಂಧ.
  4. ಲೈಂಗಿಕ ಸಂಬಂಧವುಳ್ಳ.
  5. ಸ್ವಂತ; ಖಾಸಗಿ; ತೀರ ವೈಯಕ್ತಿಕ.
  6. (ಬೆರೆಸುವುದು ಮೊದಲಾದವುಗಳ ವಿಷಯದಲ್ಲಿ) ಪೂರಾ; ಪೂರ್ತಿ; ಸಂಪೂರ್ಣ.
  7. (ಜ್ಞಾನ ಮೊದಲಾದವುಗಳ ವಿಷಯದಲ್ಲಿ) ವಿವರವಾದ; ಸಮಗ್ರವಾದ; ಆಮೂಲಾಗ್ರವಾದ; ಚಿರಪರಿಚಯದಿಂದ ಒದಗಿದ: intimate knowledge (ತುಂಬ ಪರಿಚಯದ ಫಲವಾದ) ನಿಕಟ ಜ್ಞಾನ.
  8. ಸಾರಭೂತ; ಆಂತರಿಕ; ನೈಜ.
  9. (ಒಂದು ಸ್ಥಳ ಮೊದಲಾದವುಗಳ ವಿಷಯದಲ್ಲಿ) ಆತ್ಮೀಯ; ಸ್ನೇಹಮಯ; ನಿಕಟ ಸಂಬಂಧವನ್ನು ಬೆಳೆಸುವ.
  10. (ದಿನಚರಿ ಪುಸ್ತಕದ ವಿಷಯದಲ್ಲಿ) ಆತ್ಮೀಯ; ಮನಸ್ಸಿನ ಭಾವಗಳು ಮೊದಲಾದವನ್ನು ಮುಚ್ಚುಮರೆಯಿಲ್ಲದೆ ಬರೆದಿರುವ.
  11. ನಿಕಟ ವೈಯಕ್ತಿಕ ಸಂಬಂಧಗಳನ್ನು ಬೆಳೆಸುವ.
See also 1intimate  3intimate
2intimate ಇಂಟಿಮಟ್‍
ನಾಮವಾಚಕ

ಆಪ್ತಮಿತ್ರ; ನೆಚ್ಚಿನ ಗೆಳೆಯ(ತಿ); ಸಲಿಗೆಯ ಸ್ನೇಹಿತ(ತೆ).

See also 1intimate  2intimate
3intimate ಇಂಟಿಮಟ್‍
ಸಕರ್ಮಕ ಕ್ರಿಯಾಪದ
  1. (ವಿಷಯ, ಬಯಕೆ, ಮೊದಲಾದವನ್ನು) ತಿಳಿಸು; ಹೇಳು; ಸೂಚಿಸು; ಹೊರಗೆಡಹು; ಪ್ರಕಟಿಸು.
  2. ಇಂಗಿತ, ಭಾವ – ಸೂಚಿಸು; ಮನಸ್ಸಿನಲ್ಲಿರುವುದನ್ನು ಸೂಚನೆ ಮಾತ್ರದಿಂದ ತೋರಿಸು.