See also 2interview
1interview ಇಂಟರ್ವ್ಯೂ
ನಾಮವಾಚಕ
  1. (ಮುಖ್ಯವಾಗಿ ಸಮಾಲೋಚನೆಗಾಗಿ) ಭೇಟಿ; ಸಮಾಗಮ; ವ್ಯಕ್ತಿಗಳು ಸಾಕ್ಷಾತ್ತಾಗಿ ಸೇರುವುದು, ಖುದ್ದು ಸಂಧಿಸುವುದು.
  2. ಸಂದರ್ಶನ; ಅಭ್ಯರ್ಥಿಯನ್ನು ವಾಚಾ, ಪ್ರಶ್ನೆ ಮಾಡಿ ಪರೀಕ್ಷಿಸುವುದು.
  3. ಭೇಟಿ; ಸಂದರ್ಶನ; ಪ್ರಕಟನೆಗಾಗಿ ಹೇಳಿಕೆ ಪಡೆಯಲು ಪತ್ರಿಕಾ ಪ್ರತಿನಿಧಿ ಒಬ್ಬ ವ್ಯಕ್ತಿಯನ್ನು, ಆತನ ಅಭಿಪ್ರಾಯಗಳನ್ನು ತಿಳಿದುಕೊಳ್ಳಲು ಸಂಧಿಸುವುದು.
See also 1interview
2interview ಇಂಟರ್ವ್ಯೂ
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಪ್ರಕಟನೆಗೆ ಹೇಳಿಕೆ ಪಡೆಯುವುದಕ್ಕಾಗಿ) ಭೇಟಿ ಮಾಡು; ಸಂದರ್ಶಿಸು; ಸಂದರ್ಶನ ಮಾಡು; ಖುದ್ದು ನೋಡು; ಸಮಕ್ಷಮ ನೋಡು; ಮುಖತಃಕಾಣು; ಎದುರಿನಲ್ಲಿ ಹೋಗಿ ಕಾಣು.
  2. (ಒಬ್ಬರೊಡನೆ) ಸಂದರ್ಶನ ನಡೆಸು; ಒಬ್ಬನ ಅರ್ಹತೆ, ಅಭಿಪ್ರಾಯ, ಅನುಭವಗಳನ್ನು ತಿಳಿದುಕೊಳ್ಳಲು ಪ್ರಶ್ನಿಸು, ಪ್ರಶ್ನೆ – ಮಾಡು, ಕೇಳು, ಹಾಕು.