intervene ಇಂಟರ್ವೀನ್‍
ಅಕರ್ಮಕ ಕ್ರಿಯಾಪದ
  1. (ಹೊರಗಿನ ವಸ್ತುವಾಗಿ ಯಾ ವಿಷಯವಾಗಿ) ನಡುವೆ ಬರು; ತಲೆದೋರು; ತಲೆಹಾಕು: unforeseeable developments intervene ನಿರೀಕ್ಷಿಸಲಾಗದ ಬೆಳವಣಿಗೆಗಳು ನಡುವೆ ತಲೆಹಾಕುತ್ತವೆ, ತಲೆದೋರುತ್ತವೆ.
  2. (ಸಂಬದ್ಧ ವಸ್ತುವಾಗಿ ಯಾ ವಿಷಯವಾಗಿ) ಮಧ್ಯೆ ಪ್ರವೇಶಿಸು; ಹಸ್ತಕ್ಷೇಪ ಮಾಡು.
  3. ಈ ನಡುವೆ ನಡೆ; ತನ್ಮಧ್ಯೆ ಆಗು; ಏತನ್ಮಧ್ಯೆ ಸಂಭವಿಸು; ಅಷ್ಟರಲ್ಲಿ ಆಗು; ಸಂಗತಿಗಳ, ಘಟನೆಗಳ ನಡುವಿನ ಕಾಲಾವಧಿಯಲ್ಲಿ ಆಗು.
  4. (ವ್ಯಕ್ತಿಯ ಯಾ ವಸ್ತುವಿನ ವಿಷಯದಲ್ಲಿ, ಫಲಿತಾಂಶವನ್ನು ತಡೆಯಲು, ಬದಲಾಯಿಸಲು, ಮುಂತಾಗಿ ವ್ಯಕ್ತಿಗಳ ನಡುವೆ ವ್ಯವಹಾರದಲ್ಲಿ) ತಲೆಹಾಕು; ಅಡ್ಡಬರು; ಪ್ರವೇಶಿಸು; ಮಧ್ಯೆ ಬರು.
  5. (ನ್ಯಾಯಶಾಸ್ತ್ರ) (ಮುಖ್ಯವಾಗಿ ದಾಂಪತ್ಯ ವಿಚ್ಛೇದನದ ಮೊಕದ್ದಮೆಗಳಲ್ಲಿ ‘ಕ್ವೀನ್ಸ್‍ ಪ್ರಾಕ್ಟರ್‍’ ಎಂಬ ನ್ಯಾಯಾಧಿಕಾರಿಯು ಪ್ರವೇಶಿಸುವ ಸಂದರ್ಭದಲ್ಲಿ ಮೊದಲು ಕಕ್ಷಿಯಾಗಿಲ್ಲದಿದ್ದವನು ಮೊಕದ್ದಮೆ ನಡೆಯುತ್ತಿರುವಾಗ) ನಡುವೆ ಸೇರು; ಮಧ್ಯೆ ಬರು.
  6. ನಡುವೆ ಇರು; ಮಧ್ಯದಲ್ಲಿರು; ಮಧ್ಯವರ್ತಿಯಾಗಿರು: between them high mountains intervene ಅವುಗಳ ನಡುವೆ ಎತ್ತರವಾದ ಬೆಟ್ಟಗಳಿವೆ.