interval ಇಂಟರ್ವಲ್‍
ನಾಮವಾಚಕ
  1. (ಕಾಲ, ದೇಶಗಳ ವಿಷಯದಲ್ಲಿ) ಮಧ್ಯಂತರ; ನಡುವಣ ಅವಧಿ; ಅವಕಾಶ; ಅಂತರ; ವಿರಾಮ; ಬಿಡುವು; ತೆರಪು; ವಿಚ್ಛಿತ್ತಿ.
  2. (ಬ್ರಿಟಿಷ್‍ ಪ್ರಯೋಗ) (ನಾಟಕ ಶಾಲೆ ಮೊದಲಾದವಲ್ಲಿ, ಪ್ರದರ್ಶನದ, ಕಾರ್ಯಕ್ರಮದ) ನಡುವಣ – ವಿರಾಮ, ಬಿಡುವು.
  3. (ಸಂಗೀತ) (ಸ್ವರವಿನ್ಯಾಸದಲ್ಲಿ ಯಾ ಸ್ವರಮೇಳದಲ್ಲಿ ಎರಡು ನಾದಗಳ ನಡುವಣ) ಸ್ಥಾಯಿಭೇದ.
  4. (ವ್ಯಕ್ತಿಗಳಲ್ಲಿ ಯಾ ವಸ್ತುಗಳಲ್ಲಿ) ಪರಸ್ಪರ – ಗುಣಭೇದ, ವ್ಯತ್ಯಾಸ, ಅಂತರ.
ಪದಗುಚ್ಛ

at intervals

  1. ಅಲ್ಲಲ್ಲಿ; ನಡುನಡುವೆ ಸ್ಥಳ, ಎಡೆ, ಅವಕಾಶ, ಅಂತರ – ಬಿಟ್ಟು.
  2. ಆಗಾಗ; ಕಾಲಾವಧಿಗಳಲ್ಲಿ; ನಡುನಡುವೆ ಕಾಲದ ಅವಧಿಬಿಟ್ಟು; (ಕಾಲದ ನಿಯತವೋ ಅನಿಯತವೋ ಆದ) ಅವಧಿಗಳಲ್ಲಿ, ಅವಧಿಗಳಿಗೊಮ್ಮೆ.