intersection ಇಂಟರ್‍ಸೆಕ್‍ಷನ್‍
ನಾಮವಾಚಕ
  1. ಛೇದನ; (ವಸ್ತುವನ್ನು) ಅಡ್ಡಹಾಯ್ದು ವಿಭಾಗಿಸುವುದು.
  2. (ರೇಖೆಗಳು ಮೊದಲಾದವುಗಳ ವಿಷಯದಲ್ಲಿ) ಛೇದನ; ಅಡ್ಡಹಾಯುವುದು; ಕತ್ತರಿಸುವುದು; ಛೇದಿಸುವುದು.
  3. ಛೇದಕ – ಬಿಂದು, ರೇಖೆ, ಮೂಲಾಂಶ; ಪರಸ್ಪರ ಛೇದಕವಾದ ರೇಖೆಗಳಿಗೆ, ತಲಗಳಿಗೆ ಯಾ ಸೆಟ್‍ಗಳಿಗೆ ಸಾಮಾನ್ಯವಾಗಿರುವ ಬಿಂದು, ರೇಖೆ ಯಾ ಮೂಲಾಂಶಗಳು.
  4. ಚೌಕ; ಎರಡು ರಸ್ತೆಗಳು ಒಂದನ್ನೊಂದು ಅಡ್ಡಹಾಯುವ ಛೇದಿಸುವ – ಸ್ಥಳ.