interrupt ಇಂಟರಪ್ಟ್‍
ಸಕರ್ಮಕ ಕ್ರಿಯಾಪದ
  1. (ಕೆಲಸ, ಕಾರ್ಯವಿಧಾನ, ಮಾತು, ಮಾತನಾಡುವವನು, ಮೊದಲಾದವುಗಳ ವಿಷಯದಲ್ಲಿ) ಭಂಗಮಾಡು; ಮುಂದುವರಿಯದಂತೆ ತಡೆ, ಅಡ್ಡಬರು, ಅಡ್ಡಿಪಡಿಸು (ಕರ್ಮರಹಿತವಾಗಿ ಸಹ).
  2. (ನೋಟ ಮೊದಲಾದವನ್ನು) ಅಡ್ಡಯಿಸು; ಅಡ್ಡಹಾಯ್ದು ತಡೆ; ಅಡ್ಡಬಂದು ಮರೆಮಾಡು.
  3. ವಿಚ್ಛಿನ್ನಗೊಳಿಸು; (ಯಾವುದೇ ವಿಷಯದ) ಧಾರೆಯನ್ನು, ನಿರಂತರತೆಯನ್ನು, ಅವಿಚ್ಛಿನ್ನತೆಯನ್ನು – ಮುರಿ ಯಾ ಭಂಗಪಡಿಸು.