interpret ಇಂಟರ್‍ಪ್ರಿಟ್‍
ಸಕರ್ಮಕ ಕ್ರಿಯಾಪದ
  1. (ಕ್ಲಿಷ್ಟ ಪದಗಳು, ಬರಹಗಳು, ಸ್ವಪ್ನಗಳು, ಮೊದಲಾದವುಗಳ) ಅರ್ಥ ವಿವರಿಸು.
  2. (ಯಾವುದೇ ವಿಷಯದ) ಅರ್ಥ – ಬಿಡಿಸಿ ಹೇಳು, ವಿವರಿಸು.
  3. (ಕಲೆಯ ನಿರೂಪಣೆಯ ಯಾ ಪ್ರದರ್ಶನದ ಮೂಲಕ ಅದರ) ಅರ್ಥವನ್ನು, ಉದ್ದೇಶವನ್ನು, ಇಂಗಿತವನ್ನು – ಹೊರಪಡಿಸು; ಪ್ರಕಟಿಸು.
  4. (ನಿರ್ದಿಷ್ಟ ರೀತಿಯಲ್ಲಿ) ವಿವರಿಸು; ಅರ್ಥಕಲ್ಪಿಸು; ವ್ಯಾಖ್ಯಾನಿಸು; ಅರ್ಥಮಾಡು.
  5. ಅರ್ಥಮಾಡಿಕೊ; ತಿಳಿದುಕೊ; ಗ್ರಹಿಸು; ಭಾವಿಸು: this we interpret as a threat ಇದನ್ನು ನಾವು ಬೆದರಿಕೆಯೆಂದು ತಿಳಿದುಕೊಳ್ಳುತ್ತೇವೆ, ಭಾವಿಸುತ್ತೇವೆ.
ಅಕರ್ಮಕ ಕ್ರಿಯಾಪದ
  1. ಅರ್ಥ – ವಿವರಿಸು, ಹೇಳು; ವ್ಯಾಖ್ಯಾನ ಮಾಡು.
  2. ದುಭಾಷಿಯಾಗಿ ವರ್ತಿಸು; ಬೇರೆಬೇರೆ ಭಾಷೆಗಳನ್ನಾಡುವವರ ಸಂಭಾಷಣೆಯನ್ನು ಪರಸ್ಪರ ಭಾಷಾಂತರಿಸಿ ಹೇಳುವವನಾಗಿ ವರ್ತಿಸು.