interposition ಇಂಟರ್‍ಪಸಿಷನ್‍
ನಾಮವಾಚಕ
  1. ಮಧ್ಯಸ್ಥಾಪನ; ನಡುವೆ – ಸೇರಿಸುವುದು, ಇಡುವುದು; ನಡುವೆ ಬರುವಂತೆ ಮಾಡುವುದು.
  2. (ವೀಟೊ, ಆಕ್ಷೇಪ, ಅಧಿಕಾರ, ಮೊದಲಾದವುಗಳನ್ನು) ಅಡ್ಡಿಯಾಗಿ – ಮುಂದೊಡ್ಡುವುದು, ಮುಂದೆ ಹೂಡುವುದು.
  3. (ಕಕ್ಷಿ, ಪ್ರತಿಕಕ್ಷಿಗಳ ನಡುವೆ) ಮಧ್ಯಪ್ರವೇಶ; ನಡುವೆ – ತಲೆಹಾಕುವುದು, ಪ್ರವೇಶಿಸುವುದು.
  4. (ತಡೆಯೊಡ್ಡಲಿಕ್ಕಾಗಿ) ಅಡ್ಡ ಮಾತೆತ್ತುವುದು; ಅಡ್ಡ ಪ್ರಸಂಗ ತರುವುದು.
  5. ಮಧ್ಯೆ, ನಡುವೆ – ಇಟ್ಟ ವಸ್ತು, ವಿಷಯ, ಮೊದಲಾದವು.
  6. ಅಡ್ಡಿ; ಅಡಚಣೆ.