interpose ಇಂಟರ್‍ಪೋಸ್‍
ಸಕರ್ಮಕ ಕ್ರಿಯಾಪದ
  1. ನಡುವೆ ಸೇರಿಸು; ಮಧ್ಯೆ ಇಡು; ನಡುವೆ ಬರುವಂತೆ ಮಾಡು.
  2. (ಅಸಮ್ಮತಿ, ಆಕ್ಷೇಪ, ಅಧಿಕಾರ, ಮೊದಲಾದವನ್ನು) ಅಡ್ಡಿಯಾಗಿ – ಮುಂದೊಡ್ಡು, ಮುಂದಿಡು, ತರು, ಹೂಡು.
  3. ಅಡ್ಡ ಮಾತೆತ್ತು; ಅಡ್ಡ ಪ್ರಸಂಗ ತರು; ತಡೆಯೊಡ್ಡಲಿಕ್ಕಾಗಿ (ಯಾವುದೇ ಮಾತುಗಳನ್ನು) ನಡುವೆ ಹೇಳು.
ಅಕರ್ಮಕ ಕ್ರಿಯಾಪದ
  1. (ಕಕ್ಷಿಗಳು ಮೊದಲಾದವರ) ನಡುವೆ – ಬರು, ಪ್ರವೇಶ ಮಾಡು, ತಲೆಹಾಕು.
  2. ಅಡ್ಡ ಮಾತೆತ್ತು; ನಡುವೆ ಹೇಳು.