interpolation ಇಂಟರ್‍ಪಲೇಷನ್‍
ನಾಮವಾಚಕ
  1. ಪ್ರಕ್ಷೇಪಣ:
    1. (ಕಾಲ ಮೊದಲಾದವುಗಳ) ವಿಷಯವಾಗಿ ತಪ್ಪು ಅಭಿಪ್ರಾಯ ಉಂಟುಮಾಡಲಿಕ್ಕಾಗಿ, ಪುಸ್ತಕ ಮೊದಲಾದವುಗಳಲ್ಲಿ ಸುಳ್ಳುಮಾತನ್ನು ನಡುವೆ ಸೇರಿಸುವುದು.
    2. (ಯಾವುದೇ ಪದ, ವಿಷಯ, ಮೊದಲಾದವನ್ನು) ನಡುವೆ ಸೇರಿಸುವುದು.
    3. (ಗಣಿತ) ಶ್ರೇಣಿಯಲ್ಲಿ ಮಧ್ಯದ ಪದವನ್ನು ಸೇರಿಸುವುದು.
  2. ಪ್ರಕ್ಷಿಪ್ತ; ಪುಸ್ತಕ ಮೊದಲಾದವುಗಳಲ್ಲಿ ನಡುವೆ ಸೇರಿಸಿದ ಪದ, ವಾಕ್ಯ, ಮೊದಲಾದವು.