internode ಇಂಟರ್‍ನೋಡ್‍
ನಾಮವಾಚಕ

ಗೆಣ್ಣು ನಡುವಣ, ಅಂತರಪರ್ವ – ಭಾಗ:

  1. (ಸಸ್ಯವಿಜ್ಞಾನ) ಎಲೆಗಳು ಹುಟ್ಟುವ ಎರಡು ಗೆಣ್ಣುಗಳು ನಡುವಣ ಕಾಂಡದ ಭಾಗ.
  2. (ಅಂಗರಚನಾಶಾಸ್ತ್ರ) ಎರಡು ಮೂಳೆ ಕೀಲುಗಳ ನಡುವಣ, ಮುಖ್ಯವಾಗಿ ಕೈ ಯಾ ಕಾಲುಬೆರಳುಗಳ ಮೂಳೆ ಕೀಲುಗಳ ನಡುವಣ, ತೆಳುವಾದ ಭಾಗ.