internecine ಇಂಟರ್‍ನೀಸೈನ್‍
ಗುಣವಾಚಕ
  1. ಪರಸ್ಪರ ವಿನಾಶಕ; ಅನ್ಯೋನ್ಯ ಮಾರಕ.
  2. (ಮೊದಲಿಗೆ) ಮೃತ್ಯುಕಾರಕ; ಕಗ್ಗೊಲೆಯ; ವಿಧ್ವಂಸಕ: internecine war ಕಗ್ಗೊಲೆಯ ಸಮರ; ವಿಧ್ವಂಸಕ ಯುದ್ಧ.
  3. ಅಂತಃ ಕಲಹದ; ಒಳಹೋರಾಟದ; ಅಂತಸ್ಸಂಘರ್ಷದ; ಗುಂಪೊಂದರ ಒಳಪಂಗಡಗಳ ಹೋರಾಟದ ಯಾ ಅದಕ್ಕೆ ಸಂಬಂಧಿಸಿದ: an internecine feud between artists ಕಲಾವಿದರ ಒಳಜಗಳ, ಒಳಪಂಗಡಗಳ ನಡುವಿನ ಸಂಘರ್ಷ.