1international ಇಂಟರ್‍ನ್ಯಾಷನಲ್‍
ಗುಣವಾಚಕ
  1. ಅಂತರರಾಷ್ಟ್ರೀಯ; ಅಂತಾರಾಷ್ಟ್ರೀಯ; ಎರಡು ಯಾ ಹೆಚ್ಚು ರಾಷ್ಟ್ರಗಳ ನಡುವೆ ಇರುವ.
  2. (ಎಲ್ಲ ದೇಶಗಳ ಕಾರ್ಮಿಕ ವರ್ಗಗಳೂ ಸೇರಿ ಸಾಮೂಹಿಕ ರಾಜಕೀಯ ಕಾರ್ಯಕ್ರಮ ನಡೆಸಲು ಸ್ಥಾಪಿಸಿಕೊಂಡ ‘ಇಂಟರ್ನ್ಯಾಷನಲ್‍ ವರ್ಕಿಂಗ್‍ ಮೆನ್ಸ್‍ ಅಸೋಸಿಯೇಷನ್ಸ್‍’ ಎಂಬ) ಅಂತರರಾಷ್ಟ್ರೀಯ ಕಾರ್ಮಿಕ ಸಂಘಗಳ.
  3. ಅಂತರರಾಷ್ಟ್ರೀಯ; ಎಲ್ಲಾ ರಾಷ್ಟ್ರಗಳು ಯಾ ಬಹುತೇಕ ರಾಷ್ಟ್ರಗಳು ಒಪ್ಪಿದ ಯಾ ಬಳಸುವ: international date line ಅಂತರರಾಷ್ಟ್ರೀಯ ತೇದಿರೇಖೆ. international driving licence ಅಂತರರಾಷ್ಟ್ರೀಯ ವಾಹನ ಚಾಲನೆ ರಹದಾರಿ.
2international ಇಂಟರ್‍ನ್ಯಾಷನಲ್‍
ನಾಮವಾಚಕ
  1. ಅಂತರರಾಷ್ಟ್ರೀಯ ಸ್ಪರ್ಧಿ; ಅಂತರರಾಷ್ಟ್ರೀಯ (ಸಾಮಾನ್ಯವಾಗಿ ವ್ಯಾಯಾಮ) ಸ್ಪರ್ಧೆಗಳಲ್ಲಿ ಭಾಗವಹಿಸುವವನು.
  2. ಅಂತರರಾಷ್ಟ್ರೀಯ ಸ್ಪರ್ಧೆ.
  3. (International) ಅಂತರರಾಷ್ಟ್ರೀಯ ಕಾರ್ಮಿಕ ಸಂಘ ಯಾ ಅದರ ಸದಸ್ಯ; ಸೋಷಿಯಲಿಸ್ಟ್‍ ಯಾ ಕಮ್ಯೂನಿಸ್ಟ್‍ ಕಾರ್ಯಾಚರಣೆಯನ್ನು ಬೆಂಬಲಿಸು 1864 ರಿಂದ 1936ರ ಅವಧಿಯಲ್ಲಿ ಸ್ಥಾಪಿತವಾದ ನಾಲ್ಕು ಕಾರ್ಮಿಕ ಸಂಘಗಳಲ್ಲಿ ಒಂದು ಯಾ ಅವುಗಳಲ್ಲಿ ಯಾವುದಾದರೂ ಒಂದರ ಸದಸ್ಯ.