See also 2internal
1internal ಇನ್‍ಟರ್ನಲ್‍
ಗುಣವಾಚಕ
  1. (ಒಂದರ) ಒಳಗಿನ; ಒಳಗಡೆಯ; ಒಳಗಿರುವ; ಆಂತರಿಕ; ಅಂತಸ್ಥ.
  2. ಸಹಜ; ನೈಜ; (ಒಂದರ) ಒಳಸ್ವರೂಪದ; ಆಂತರಿಕ ಸ್ವಭಾವದ.
  3. (ಔಷಧ ಮೊದಲಾದವುಗಳ ವಿಷಯದಲ್ಲಿ) ದೇಹದ ಒಳಕ್ಕೆ ಯಾ ಒಳಭಾಗಕ್ಕೆ ಕೊಡುವ, ಹಚ್ಚುವ.
  4. ದೇಹದ ಒಳಗಿನ, ಒಳಭಾಗಕ್ಕೆ ಸಂಬಂಧಿಸಿದ: internal injuries ದೇಹದ ಒಳಭಾಗಕ್ಕೆ ಆದ ಹಾನಿಗಳು: internal organs ದೇಹದ ಒಳಾವಯವಗಳು.
  5. (ವಿದ್ಯಾರ್ಥಿಯ ವಿಷಯದಲ್ಲಿ) ವಿಶ್ವವಿದ್ಯಾನಿಲಯ ಮೊದಲಾದವಕ್ಕೆ ಹಾಜರಾಗಿ ಪರೀಕ್ಷೆಗೂ ಕುಳಿತುಕೊಳ್ಳುತ್ತಿರುವ; ಆಂತರಿಕ.
  6. (ಒಂದು ದೇಶದ) ಆಂತರಿಕ; ಒಳಾಡಳಿತದ; ಒಳದೇಶದ ವ್ಯವಹಾರದ; ಗೃಹ ವ್ಯವಹಾರದ; ಗೃಹ – ಶಾಖೆಯ, ಖಾತೆಯ, ಇಲಾಖೆಯ.
  7. ಆಂತರಿಕ; ಒಂದು ವಸ್ತುವಿನ ಒಳಭಾಗದ.
  8. ಆಂತರಿಕ; ಅಂತರಂಗದ; ಮನಸ್ಸಿನ ಯಾ ಆತ್ಮದ; ಮಾನಸಿಕ ಯಾ ಆಧ್ಯಾತ್ಮಿಕ.
  9. ಒಳ ಮುಖವಾದ; ಆಂತರ್ಮುಖವಾದ.
  10. ವ್ಯಕ್ತಿಗತ; ವೈಯಕ್ತಿಕ.
See also 1internal
2internal ಇನ್‍ಟರ್ನಲ್‍
ನಾಮವಾಚಕ

(ಬಹುವಚನದಲ್ಲಿ) ಆಂತರಿಕ ಗುಣಗಳು; ಸಹಜ ಯಾ ನೈಜ ಗುಣಗಳು.