See also 2intern  3intern
1intern ಇನ್‍ಟರ್ನ್‍
ಸಕರ್ಮಕ ಕ್ರಿಯಾಪದ

(ದೇಶ, ಪ್ರದೇಶ, ಮೊದಲಾದವುಗಳ ಗಡಿಗೆ ಒಳಪಟ್ಟೇ ಇರಬೇಕೆಂದು) ನಿರ್ಬಂಧಿಸು; ಸ್ಥಾನಬದ್ಧಗೊಳಿಸು; ಒಂದು ಎಲ್ಲೆಯೊಳಗೆ ಕೂಡಿಟ್ಟಿರು, ಬಂಧಿಸಿರು.

See also 1intern  3intern
2intern ಇನ್‍ಟರ್ನ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಇಂಟರ್ನ್‍:

  1. ಆಸ್ಪತ್ರೆಯಲ್ಲಿ ವಾಸಿಸುತ್ತಾ ಸಹಾಯಕ ವೈದ್ಯನಾಗಿ ಇಲ್ಲವೆ ಶಸ್ತ್ರಚಿಕಿತ್ಸಕನಾಗಿ ಹಂಗಾಮಿಯಾಗಿ ವರ್ತಿಸುವ ಉನ್ನತ ವಿದ್ಯಾರ್ಥಿ ಯಾ ನೂತನ ಪದವೀಧರ.
  2. ಪ್ರಾಯೋಗಿಕ ಶಿಕ್ಷಣ ಪಡೆಯುತ್ತಿರುವ ಉಪಾಧ್ಯಾಯ, ಶಿಕ್ಷಕ.
See also 1intern  2intern
3intern ಇನ್‍ಟರ್ನ್‍
ಅಕರ್ಮಕ ಕ್ರಿಯಾಪದ

(ಅಮೆರಿಕನ್‍ ಪ್ರಯೋಗ) ಇಂಟರ್ನಾಗಿರು:

  1. ಇಂಟರ್ನಾಗಿ ಸೇವೆ ಸಲ್ಲಿಸು; (ಉನ್ನತ ವಿದ್ಯಾರ್ಥಿ ಯಾ ನೂತನ ಪದವೀಧರನ ವಿಷಯದಲ್ಲಿ) ಆಸ್ಪತ್ರೆಯಲ್ಲಿ ವಾಸಿಸುತ್ತಾ ಸಹಾಯಕ ವೈದ್ಯನಾಗಿ ಇಲ್ಲವೆ ಶಸ್ತ್ರವೈದ್ಯನಾಗಿ ಇರು, ಸೇವೆಸಲ್ಲಿಸು.
  2. ಪ್ರಾಯೋಗಿಕ ಶಿಕ್ಷಣ ಪಡೆಯುತ್ತಿರುವ ಶಿಕ್ಷಕನಾಗಿರು.