interlude ಇಂಟರ್ಲೂ(ರ್ಲ್ಯೂ)ಡ್‍
ನಾಮವಾಚಕ
  1. (ನಾಟಕದಲ್ಲಿ) ಅಂಕವಿರಾಮ; ಅಂಕಗಳ ನಡುವಣ ವಿರಾಮ.
  2. ವಿಷ್ಕಂಭ; ಅಂಕವಿರಾಮದಲ್ಲಿ ನಡೆಸುವ ವಿನೋದಪ್ರಸಂಗ ಮೊದಲಾದವು.
  3. (ಸಂಗೀತ) ಅಂತರ – ಗೀತೆ, ಕೃತಿ; ಅಂತರವಾದನ; ಸ್ತುತಿ ಗೀತೆಗಳ ಮಧ್ಯೆ ಹಾಡುವ, ವಾದನ ಮಾಡುವ ವಾದ್ಯಗೀತೆ.
  4. ಭಿನ್ನಕಾಲ ಯಾ ಭಿನ್ನದೇಶ ನಡುವೆ ಬರುವ ಬೇರೆ ರೂಪದ ಕಾಲಾವಕಾಶ ಯಾ ಸ್ಥಳಾವಕಾಶ.
  5. ಉಪಪ್ರಸಂಗ; ನಡುವೆ ಬರುವ ಉಪಕಥೆ, ಉಪನಾಟಕ, ಯಾ ಉಪಸಂಗತಿ; ನಡುವೆ ತಂದು ಸೇರಿಸಿದ ಪ್ರಸಂಗ, ಘಟನೆ, ವಿನೋದಪ್ರಕರಣ, ಮೊದಲಾದವು.
  6. (ಚರಿತ್ರೆ) ಅಂತರದೃಶ್ಯ; ಅಂಕಾಂತರ ದೃಶ್ಯ; ಅಂಕಮಧ್ಯ ದೃಶ್ಯ; ಏಸುಕ್ರಿಸ್ತನನ್ನು ಕುರಿತ ಯಾ ಕ್ರೈಸ್ತಸಂತರನ್ನು ಕುರಿತ ‘ಮಿಸ್ಟರಿ’ ನಾಟಕಗಳಲ್ಲಿ ಯಾ ನೀತಿನಾಟಕಗಳಲ್ಲಿ ಅಂಕಗಳ ನಡುವೆ ಸೇರಿಸುತ್ತಿದ್ದ ಸಣ್ಣ ನಾಟಕೀಯ ದೃಶ್ಯ ಯಾ ವಿಡಂಬನ ದೃಶ್ಯ.