1interlock ಇಂಟರ್‍ಲಾಕ್‍
ಸಕರ್ಮಕ ಕ್ರಿಯಾಪದ
  1. (ಸಾಮಾನ್ಯವಾಗಿ ಕರ್ಮಣಿಪ್ರಯೋಗದಲ್ಲಿ) ಒಂದರೊಳಗೊಂದನ್ನು ತಳಕುಹಾಕು; ಪರಸ್ಪರ ತೊಡರಿಸು, ಬಂಧಿಸು.
  2. (ರೈಲ್ವೆ) (ಸನ್ನೆ ಮೊದಲಾದವನ್ನು) ಸಂಕೇತ ಕೊಡಲಿಕ್ಕಾಗಿ ಅಗುಣಿಗಳಿಂದ ಕೂಡಿಸು; ಸೇರಿಸು; ಬಂಧಿಸು.
ಅಕರ್ಮಕ ಕ್ರಿಯಾಪದ

(ಒಂದರ ಮೇಲೊಂದು ಹಾದು ಹರಡುವುದರಿಂದ) ಪರಸ್ಪರ – ತೊಡರಿಕೊ, ತೆಕ್ಕೆಹಾಕಿಕೊ, ಕೂಡಿಕೊ, ತಳಕುಹಾಕಿಕೊ, ಬದ್ಧವಾಗು.

2interlock ಇಂಟರ್‍ಲಾಕ್‍
ಗುಣವಾಚಕ

(ಬಟ್ಟೆಯ ವಿಷಯದಲ್ಲಿ) ಹತ್ತಿರ ಹತ್ತಿರದಲ್ಲಿ ಕೂಡುಹೊಲಿಗೆ, ಹೊಲಿಗೆ ಹಾಕಿದ.

3interlock ಇಂಟರ್‍ಲಾಕ್‍
ನಾಮವಾಚಕ

ಇಂಟರ್‍ಲಾಕ್‍; ಕೂಡಿಕೆ; ಬೇರೆ ಬೇರೆ ಭಾಗಗಳು ಕ್ರಮದಲ್ಲಿ ಕೆಲಸ ಮಾಡುವಂತೆ ಕೂಡಿಸುವ ಸಾಧನ ಯಾ ವ್ಯವಸ್ಥೆ.