interlace ಇಂಟರ್‍ಲೇಸ್‍
ಸಕರ್ಮಕ ಕ್ರಿಯಾಪದ
  1. ಹೆಣೆ; ಒಂದರೊಳಗೊಂದನ್ನು ಸೇರಿಸಿ ಕಟ್ಟು, ಬಂಧಿಸು.
  2. ತೊಡಗಿಸು; ತೊಡಕಾಗಿ ರಚಿಸು; ಸಿಕ್ಕುಸಿಕ್ಕಾಗಿಸು; ಗೋಜುಗೋಜು ಮಾಡು.
  3. (ರೂಪಕವಾಗಿ ಸಹ) ಪರಸ್ಪರ ಹೆಣೆ; ಬಲೆಯಂತೆ ಮಾಡು.
  4. ಒಡಬೆರಸು; ಒಡಸೇರಿಸು; ಮಿಶ್ರಣಮಾಡು; ಎರಡು ವಸ್ತುಗಳನ್ನು ಬೆರಸು; ಒಂದರಲ್ಲೊಂದನ್ನು (ಬೆರೆಯುವಂತೆ) ಸೇರಿಸು.
ಅಕರ್ಮಕ ಕ್ರಿಯಾಪದ

ಒಂದನ್ನೊಂದು ತೊಡರಿಕೊಂಡು ಅಡ್ಡಹಾಯು.