interject ಇಂಟರ್‍ಜೆಕ್ಟ್‍
ಸಕರ್ಮಕ ಕ್ರಿಯಾಪದ
  1. (ಅಡ್ಡಮಾತು, ಟೀಕೆ, ಮೊದಲಾದವನ್ನು) ಇದ್ದಕ್ಕಿದ್ದಂತೆ – ನಡುವೆ ಸೇರಿಸು, ಮಧ್ಯೆ ಆಡು; ಪ್ರಾಸಂಗಿಕವಾಗಿ ನಡುವೆ ನುಗ್ಗಿಹೇಳು.
  2. (ನಡೆಯುತ್ತಿರುವ ಮಾತಿಗೆ ನೇರವಾದ ಸಂಬಂಧವಿಲ್ಲದಿರುವಂಥ) ಮಾತನ್ನು, ಟೀಕೆಯನ್ನು – ಮಧ್ಯೆ ಹೇಳಿಬಿಡು; ಅಡ್ಡ – ಟೀಕೆ ಮಾಡು, ಮಾತಾಡು; ಪ್ರಸಕ್ತವಲ್ಲದ ವ್ಯಾಖ್ಯಾನವನ್ನು ನಡುವೆ ತೂರಿಸು, ನುಗ್ಗಿಸು.