See also 2interior
1interior ಇಂಟಿಅರಿಅರ್‍
ಗುಣವಾಚಕ
  1. ಒಳಗೆ; ಒಳಗಿನ.
  2. (ಹೋಲಿಸಿದಾಗ) ಒಳಗಡೆಯಿರುವ; ಒಳಭಾಗದಲ್ಲಿರುವ; ಒಳಗಣ; ಆಂತರಿಕ; ಅಂತಸ್ಥ.
  3. ಒಳನಾಡಿನ; ಸಮುದ್ರದ ಕರೆಯಿಂದ ಯಾ ಗಡಿಯಿಂದ ದೂರದಲ್ಲಿರುವ.
  4. ಸ್ವದೇಶದ; ಒಳದೇಶದ; ಒಳನಾಡಿನ; ವಿದೇಶೀಯಲ್ಲದ; ಗೃಹ ವ್ಯವಹಾರದ.
  5. ಅಂತರಂಗದ; ಮಾನಸಿಕ ಯಾ ಅಧ್ಯಾತ್ಮದ; ಮನಸ್ಸಿನಲ್ಲಿ ಯಾ ಆತ್ಮದಲ್ಲಿ ಇರುವ: they give the key to his whole interior ಅವನ ಇಡೀ ಅಂತರಂಗಕ್ಕೆಲ್ಲ ಅವು ಬೀಗದ ಕೈಯಾಗಿವೆ.
  6. ಒಳಗಡೆಯಿಂದ ಬಂದ.
  7. ಗೃಹಾಂತರದ; ಗೃಹಾಂತರ; ಒಂದು ಕಟ್ಟಡದ ಒಳಗಣ; ಒಳಗೆ ಬರೆದ, ಚಿತ್ರೀಕರಿಸಿದ, ಮೊದಲಾದ.
See also 1interior
2interior ಇಂಟಿಅರಿಅರ್‍
ನಾಮವಾಚಕ
  1. ಒಳಗು; ಒಳಭಾಗ; ಅಂತರ.
  2. ಒಳನಾಡು; ಒಳಪ್ರದೇಶ.
  3. ಕಟ್ಟಡದ ಯಾ ಕೊಟಡಿಯ ಒಳಭಾಗ.
  4. (ಕಟ್ಟಡ ಯಾ ಕೊಟಡಿಯ) ಒಳ ನೋಟ; ಒಳಭಾಗದ – ನೋಟ, ದೃಶ್ಯ, ಚಿತ್ರ.
  5. ಒಳಸ್ವಭಾವ; ಆಂತರಿಕ – ಸ್ವಭಾವ, ಸ್ವರೂಪ.
  6. ಆತ್ಮ.
  7. (ದೇಶದ) ಒಳಾಡಳಿತ; ಒಳವ್ಯವಹಾರ; ಆಂತರಿಕ ವ್ಯವಹಾರ; ಗೃಹವ್ಯವಹಾರ; ಗೃಹಾಡಳಿತ.
  8. (ದೇಶದ) ಗೃಹಖಾತೆ; ಗೃಹಶಾಖೆ; ಒಳಾಡಳಿತ ಶಾಖೆ; ಗೃಹ ಆಡಳಿತದ, ವ್ಯವಹಾರದ – ಇಲಾಖೆ: Minister of the Interior ಗೃಹಮಂತ್ರಿ; ಒಳಾಡಳಿತ ಸಚಿವ.