interference ಇಂಟರ್‍ಹಿಅರನ್ಸ್‍
ನಾಮವಾಚಕ
  1. (ಇನ್ನೊಬ್ಬ ವ್ಯಕ್ತಿಗೆ) ಅಡ್ಡಬರುವಿಕೆ; ವಿರುದ್ಧವಾಗಿ ಬರುವುದು.
  2. (ತನಗೆ ಸೇರದ ವ್ಯವಹಾರದಲ್ಲಿ) ನಡುವೆ ಬರುವುದು; ಮಧ್ಯಪ್ರವೇಶ; ತಲೆಹಾಕುವುದು; ಕೈಹಾಕುವುದು; ನಡುವೆ ಪ್ರವೇಶಿಸುವುದು.
  3. (ಭೌತವಿಜ್ಞಾನ) ವ್ಯತಿಕರಣ; ಬೆಳಕು, ಶಬ್ದ ಮೊದಲಾದವುಗಳ ಅಲೆಗಳು ಒಂದಕ್ಕೊಂದು ಬಡಿದು ಕೆಲವು ಬಿಂದುಗಳಲ್ಲಿ ಒಂದನ್ನೊಂದು ರದ್ದುಗೊಳಿಸುವುದರಿಂದ ಮತ್ತು ಇನ್ನು ಕೆಲವು ಬಿಂದುಗಳಲ್ಲಿ ಒಂದಕ್ಕೊಂದು ಸೇರಿಕೊಳ್ಳುವುದರಿಂದ ಪರ್ಯಾಯವಾಗಿ ಕತ್ತಲೆ ಬೆಳಕುಗಳಾಗಲೀ, ನಿಶ್ಯಬ್ದ ಅತಿಶಬ್ದಗಳಾಗಲೀ ಉತ್ಪತ್ತಿಯಾಗುವುದು.
  4. (ಕುದುರೆಯ ವಿಷಯದಲ್ಲಿ) ಕಾಲುಬಡಿತ; ಪಾದತಾಡನ; ಒಂದು ಕಾಲನ್ನು ಇನ್ನೊಂದಕ್ಕೆ ಹೊಡೆಯುವುದು.
  5. (ಅಮೆರಿಕನ್‍ ಪ್ರಯೋಗ) ಪೇಟೆಂಟ್‍ – ಘರ್ಷಣೆ, ತಿಕ್ಕಾಟ, ಹೋರಾಟ; ಒಂದೇ ಪೇಟೆಂಟ್‍ಗಾಗಿ ಹಕ್ಕು ಹೇಳಿಕೊಳ್ಳುವ ಇಬ್ಬರ ಅರ್ಜಿಗಳಿಂದ ಹುಟ್ಟುವ ಸಂಘರ್ಷ.