interfere ಇಂಟರ್‍ಹಿಅರ್‍
ಅಕರ್ಮಕ ಕ್ರಿಯಾಪದ
  1. (ವಸ್ತುವಿನ ವಿಷಯದಲ್ಲಿ, ಇನ್ನೊಂದಕ್ಕೆ) ಅಡ್ಡವಾಗಿ ಯಾ ವಿರುದ್ಧವಾಗಿ ಬರು.
  2. (ವ್ಯಕ್ತಿಯ ವಿಷಯದಲ್ಲಿ) (ಸಂಬಂಧಿಸದ ವ್ಯವಹಾರದಲ್ಲಿ) ತಲೆಹಾಕು; ಕೈಹಾಕು; ಹಸ್ತಕ್ಷೇಪ ಮಾಡು; ನಡುವೆ ಬರು; ಮಧ್ಯೆ ಪ್ರವೇಶಿಸು.
  3. (ವ್ಯವಹಾರದಲ್ಲಿ) ನಡುವೆ ಪ್ರವೇಶಿಸು; ಭಾಗಿಯಾಗು; ಪಾತ್ರ ವಹಿಸು.
  4. (ಭೌತವಿಜ್ಞಾನ) (ಬೆಳಕು, ಶಬ್ದ, ಮೊದಲಾದ ಅಲೆಗಳ ವಿಷಯದಲ್ಲಿ ಭಾಗಶಃ ಯಾ ಪೂರ್ಣ ತಟಸ್ಥೀಕರಣವನ್ನುಂಟುಮಾಡಲು) ವ್ಯತಿಕರಿಸು; ಒಂದಕ್ಕೊಂದು ಬಡಿ.
  5. (ಕುದುರೆಯ ವಿಷಯದಲ್ಲಿ) ಒಂದು ಕಾಲನ್ನು ಇನ್ನೊಂದಕ್ಕೆ – ಹೊಡೆ, ಬಡಿ.
ಪದಗುಚ್ಛ

interfere with (ಸೌಮ್ಯೋಕ್ತಿ) (ಮುಖ್ಯವಾಗಿ ಸಂಭೋಗಕ್ಕಾಗಿ) ಆಕ್ರಮಣ ಮಾಡು; ಕಾಡು; ಪೀಡಿಸು; ಹಿಂಸಿಸು.