See also 2interdict
1interdict ಇಂಟರ್‍ಡಿಕ್ಟ್‍
ನಾಮವಾಚಕ
  1. ಅಧಿಕಾರ ಪೂರ್ವಕವಾದ ನಿಷೇಧ; ಅಧಿಕೃತ ನಿರೋಧ.
  2. (ಸ್ಕಾಟ್ಲೆಂಡ್‍ ನ್ಯಾಯಶಾಸ್ತ್ರ) = injunction.
  3. (ರೋಮನ್‍ ಕ್ಯಾಥೊಲಿಕ್‍) ಬಹಿಷ್ಕಾರ (ಶಿಕ್ಷೆ); (ಒಬ್ಬ ಮನುಷ್ಯನನ್ನು, ಒಂದು ಸ್ಥಳವನ್ನು) ಧಾರ್ಮಿಕ ವ್ಯವಹಾರ ಮೊದಲಾದವುಗಳಿಂದ ಬಹಿಷ್ಕರಿಸುವ ಶಿಕ್ಷೆ.
See also 1interdict
2interdict ಇಂಟರ್‍ಡಿಕ್ಟ್‍
ಸಕರ್ಮಕ ಕ್ರಿಯಾಪದ
  1. (ಕ್ರಿಯೆಯನ್ನು) ನಿರೋಧಿಸು; ನಿಷೇಧಿಸು.
  2. (ಒಂದು ವಸ್ತು ಮೊದಲಾದವುಗಳ ಬಳಕೆಯನ್ನು) ನಿಷೇಧಿಸು; ಬಹಿಷ್ಕರಿಸು.
  3. (ಒಬ್ಬನು ಯಾವುದೋ ಒಂದು ಕೆಲಸವನ್ನು ಮಾಡಕೂಡದೆಂದು) ತಡೆ; ಅಡ್ಡಿ ಮಾಡು; ಪ್ರತಿಬಂಧಿಸು.
  4. (ಒಂದು ವಸ್ತು ಮೊದಲಾದವನ್ನು) ಕೊಡಬಾರದೆಂದು ನಿಷೇಧಿಸು.