intercalary ಇಂಟರ್‍ಕ(ಕ್ಯಾ)ಲರಿ
ಗುಣವಾಚಕ
  1. (ದಿನ ಯಾ ತಿಂಗಳಿನ ವಿಷಯದಲ್ಲಿ) ಅಧಿಕ; ಚಾಂದ್ರಮಾನದ ವರ್ಷವನ್ನು ಸೌರಮಾನದ ವರ್ಷಕ್ಕೆ ಸರಿ ಹೊಂದಿಸುವುದಕ್ಕಾಗಿ ನಡುವೆ ಸೇರಿಸಿದ (ಉದಾಹರಣೆಗೆ ಅಧಿಕ ವರ್ಷದಲ್ಲಿ ಬರುವ ಫೆಬ್ರವರಿ 29ನೇ ತಾರೀಖು): intercalary month ಅಧಿಕ ಮಾಸ.
  2. (ವರ್ಷದ ವಿಷಯದಲ್ಲಿ) ಅಧಿಕ; ಅಧಿಕ ದಿನ ಯಾ ಅಧಿಕಮಾಸ ಉಳ್ಳ.
  3. ನಡುವೆ, ಮಧ್ಯೆ – ಸೇರಿಸಿದ; ಪ್ರಕ್ಷಿಪ್ತ; ಅಂತಃಕ್ಷಿಪ್ತ; ನಡುವೆ ತೂರಿಸಿದ; ಅಂತರ್ನಿವಿಷ್ಟ.