intention ಇಂಟೆನ್ಷನ್‍
ನಾಮವಾಚಕ
  1. ಉದ್ದೇಶಿಸುವುದು; ಆಶಿಸುವುದು; ಪ್ರಯತ್ನಿಸುವುದು.
  2. ಉದ್ದೇಶ; ಆಶಯ; ಇಂಗಿತ; ಇರಾದೆ; ಮನೋಗತ; ಅಭಿಪ್ರಾಯ.
  3. ಅಂತ್ಯೋದ್ದೇಶ; ಅಂತಿಮ ಗುರಿ.
  4. (ಸಾಮಾನ್ಯವಾಗಿ ಬಹುವಚನದಲ್ಲಿ, ಆಡುಮಾತು) (ಮುಖ್ಯವಾಗಿ ಗಂಡಸಿನ) ಮದುವೆಯ ಪ್ರಸ್ತಾವದ ಉದ್ದೇಶಗಳು.
  5. (ತರ್ಕಶಾಸ್ತ್ರ) ಭಾವನೆ; ಕಲ್ಪನೆ.
ಪದಗುಚ್ಛ
  1. first intention ಕಲೆಗಟ್ಟದೆ ಮಾಯುವುದು; ಕಣರಹಿತ ಮಾಯುವಿಕೆ; ಗಾಯದ ಎರಡೂ ಕಡೆಯ ಚರ್ಮ ನೇರವಾಗಿ ಕೂಡಿಕೊಂಡು ಗಾಯ ಮಾಯುವುದು.
  2. first intentions (ತರ್ಕಶಾಸ್ತ್ರ) (ವಸ್ತುಗಳ ವಿಷಯದಲ್ಲಿ) ಪ್ರಥಮ ಭಾವನೆಗಳು; ಆದ್ಯ ಕಲ್ಪನೆಗಳು (ಉದಾಹರಣೆಗೆ ಮರ, ಹಸು ಇತ್ಯಾದಿ).
  3. particular intention = ಪದಗುಚ್ಛ \((6)\).
  4. second intention (ವೈದ್ಯಶಾಸ್ತ್ರ) ಕಣಗೂಡಿ ಮಾಯುವುದು; ಕಲೆಗಟ್ಟಿ ಮಾಯುವಿಕೆ; ನೆತ್ತರು ಹೆಪ್ಪುಗಟ್ಟಿ ಗಾಯ ಮಾಯುವುದು; ಗಾಯದ ಮೇಲೆ ಕೆಂಪುಕಣಗಳು ರೂಪುಗೊಂಡು ಅವುಗಳ ನೆರವಿನಿಂದ ಚರ್ಮ ಸೇರಿಕೊಂಡು ಗಾಯ ಮಾಯುವುದು.
  5. second intentions (ಪ್ರಥಮ ಭಾವನೆಯ ಮೇಲೆ ಆಲೋಚನೆಯಿಂದ ಹುಟ್ಟಿದ) ದ್ವಿತೀಯ ಭಾವನೆಗಳು, ಕಲ್ಪನೆಗಳು (ಉದಾಹರಣೆಗೆ ವ್ಯತ್ಯಾಸ, ಜಾತಿ, ಗುಣ, ಮೊದಲಾದವು).
  6. special intention (ದೇವತಾಶಾಸ್ತ್ರ) (‘ಮಾಸ್‍’ ಸಂಸ್ಕಾರದಲ್ಲಿ ಯಾವ ಫಲಪ್ರಾಪ್ತಿಯಾಗಿ ಸಲ್ಲಿಸಲಾಗುವುದೋ ಆ) ವಿಶೇಷೋದ್ದೇಶ.