See also 2intent
1intent ಇನ್ಟೆನ್ಟ್‍
ನಾಮವಾಚಕ

ಆಶಯ; ಅಭಿಪ್ರಾಯ; ಉದ್ದೇಶ; ಇರಾದೆ; ಇಂಗಿತ: with intent to defraud ಮೋಸಗೊಳಿಸುವ ಉದ್ದೇಶದಿಂದ. with evil intent ದುರುದ್ದೇಶದಿಂದ. with good intent ಸದಭಿಪ್ರಾಯದಿಂದ.

ನುಡಿಗಟ್ಟು

to all intents and purposes ನಿಜವಾಗಿ ಹೇಳುವುದಾದರೆ; ವಸ್ತುತಃ; ಹೆಚ್ಚುಕಡಮೆ; ಬಹುತೇಕ; ಬಲುಮಟ್ಟಿಗೆ; ಬಹುತರವಾಗಿ.

See also 1intent
2intent ಇನ್ಟೆನ್ಟ್‍
ಗುಣವಾಚಕ
  1. ನಿಶ್ಚಯಿಸಿದ; ನಿಶ್ಚಿತ; (ಒಂದನ್ನು ಮಾಡಲು ಯಾ ಒಂದರ ಮೇಲೆ) ಮನಸ್ಸು ಮಾಡಿರುವ; ನಿರ್ಧರಿಸಿರುವ.
  2. ಮಗ್ನನಾಗಿರುವ; ತಲ್ಲೀನನಾಗಿರುವ; ಅತಿಶ್ರದ್ಧೆಯಿಂದ (ಒಂದರಲ್ಲಿ) ತತ್ಪರನಾಗಿರುವ: intent on studies ವ್ಯಾಸಂಗದಲ್ಲಿ ಮಗ್ನನಾಗಿರುವ.
  3. (ಮುಖ್ಯವಾಗಿ ಮುಖಭಾವದ ವಿಷಯದಲ್ಲಿ) ಉತ್ಸುಕ; ಶ್ರದ್ಧಾಪೂರ್ವಕ; ತೀವ್ರಾಭಿಲಾಷೆಯ; ಕುತೂಹಲದ; ಆಸಕ್ತಿಯಿಂದ ತುಂಬಿರುವ.