See also 2intensive
1intensive ಇಂಟೆನ್ಸಿವ್‍
ಗುಣವಾಚಕ
  1. ತೀವ್ರವಾದ ಯಾ ತೀವ್ರತೆಗೆ ಸಂಬಂಧಿಸಿದ.
  2. ತೀವ್ರ; ಗಾಢ: intensive study ತೀವ್ರವಾದ ಅಧ್ಯಯನ.
  3. ತೀವ್ರಗೊಳಿಸುವ; ತೀವ್ರತೆಯನ್ನುಟುಮಾಡುವ.
  4. (ವ್ಯಾಕರಣ) (ಗುಣವಾಚಕ, ಕ್ರಿಯಾವಿಶೇಷಣಗಳ ವಿಷಯದಲ್ಲಿ) ಆಧಿಕ್ಯವಾಚಕ; ತೀವ್ರತೆಯನ್ನು ಸೂಚಿಸುವ, ಉದಾಹರಣೆಗೆ my feet are really cold ಎಂಬ ವಾಕ್ಯದಲ್ಲಿ really.
  5. ಕೇಂದ್ರೀಕೃತ; ಒಂದು ಬಿಂದುವಿನತ್ತ, ವಿಸ್ತೀರ್ಣದತ್ತ, ವಿಷಯದ ಕಡೆ ನಿರ್ದೇಶಿಸಿದ: intensive bombardment ಕೇಂದ್ರೀಕೃತ ಬಾಂಬು ದಾಳಿ.
  6. (ಅರ್ಥಶಾಸ್ತ್ರ) ಸಾಂದ್ರೀಕೃತ; ಅಧಿಕೋತ್ಪಾದಕ; ಅಧಿಕೋತ್ಪಾದನೆಯ; ನಿರ್ದಿಷ್ಟ ಪ್ರದೇಶದ ವೆಚ್ಚಕ್ಕೆ ಸಂಬಂಧಿಸಿದಂತೆ ಉತ್ಪತ್ತಿಯನ್ನು ಹೆಚ್ಚಿಸುವ: intensive agriculture ಸಾಂದ್ರೀಕೃತ ವ್ಯವಸಾಯ.
  7. (ಸಾಮಾನ್ಯವಾಗಿ ಸಮಾಸ ಪೂರ್ವಪದವಾಗಿ) ಆಧಿಕ್ಯದ; ತುಂಬ ಬಳಸುವ; ಹೆಚ್ಚಾಗಿ ಬಳಸುವ; ಅಧಿಕ ಪ್ರಯೋಗದ; ಉಪಯೋಗಾಧಿಕ್ಯದ: a labour intensive industry ಕಾರ್ಮಿಕರನ್ನು ಹೆಚ್ಚಾಗಿ ಬಳಸುವ ಕೈಗಾರಿಕೆ; ಕಾರ್ಮಿಕಾಧಿಕ್ಯದ ಕೈಗಾರಿಕೆ.
See also 1intensive
2intensive ಇಂಟೆನ್ಸಿವ್‍
ನಾಮವಾಚಕ

(ವ್ಯಾಕರಣ) ಆಧಿಕ್ಯವಾಚಕ (ಪದ ಮೊದಲಾದವು): himself ಎಂಬಲ್ಲಿನ self.